

ಕಡಬ: ಮರ್ದಾಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿರುವ ನೆಕ್ಕಿತ್ತಡ್ಕ ಮುಖಾಂ ಉರುಸ್ ಸಮಾರೋಪ ಸಮಾರಂಭದಲ್ಲಿ ಕೇರಳದ ಮುತ್ತನ್ನೂರು ಅಸ್ಸಯ್ಯದ್ ಶಯಾಬುದ್ದೀನ್ ಅಹ್ದಲ್ ತಂಞಳ್ ದುವಾಃ ಮತ್ತು ಮುಖ್ಯ ಪ್ರಭಾಷಣ ನೆರವೇರಿಸಿದರು.
ಸಮಾಜ ಸೇವಕ ಕಡಬ ಗ್ರಾಮದ ಅಡ್ಡಗದ್ದೆ ನಿವಾಸಿ ಸಯ್ಯದ್ ಮೀರಾ ಸಾಹೇಬ್ ಅವರನ್ನು ಸನ್ಮಾನಿಸಲಾಯಿತು. ಹನೀಫ್ ಸಖಾಫಿ ಎಮ್ಮೆಮಾಡು, ಉಸ್ಮಾನ್ ಮದನಿ ಕುತ್ತಾರ್, ಅಬ್ದುಲ್ ರಹಿಮಾನ್ ಅಡ್ಕಾಡಿ, ಕೆ.ಎ.ಮುಹಮ್ಮದ್, ಮುಹಮ್ಮದ್ ಶರೀಫ್, ಶೇಖ್ ಮುಹಮ್ಮದ್, ಅಬ್ದುಲ್ ಖಾದರ್ ಹಾಜಿ, ಹಾಜಿ ಎಂ.ಪಿ.ಎಂ.ಶರೀಫ್ ಪೈಝಿ ಉಸ್ತಾದ್, ಉಮ್ಮರ್ ಸೀಗೆಯಡಿ, ಫಝಲ್ ಕೋಡಿಂಬಾಳ, ಸ್ವಾದಿಕ್, ಉಮ್ಮರ್ ಹಾಜಿ ಕೋಡಿಕಂಡ, ಶಾಕಿರ್ ಪಿಲ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ನೆಕ್ಕಿತ್ತಡ್ಕ ಉರುಸ್ ಸಮಿತಿ ಅಧ್ಯಕ್ಷ ಉಮ್ಮರ್ ಮುಸ್ಲಿಯಾರ್ ಸ್ವಾಗತಿಸಿದರು. ಮರ್ದಾಳ ಬದ್ರಿಯಾ ಜುಮಾ ಮಸೀದಿಯ ಖತೀಬ ಹನೀಫ್ ಸಖಾಫಿ ಕನ್ಯ ಪ್ರಸ್ತಾವನೆಗೈದರು. ಹಾಫಿಳ್ ಫಾರೂಕ್ ಹಿಮಾಮಿ ನೆಕ್ಕಿತ್ತಡ್ಕ ವಂದಿಸಿದರು.