

ಬೆಂಗಳೂರು: ಕೊಪ್ಪಳದ ಹುಲಿಗೆಮ್ಮದೇವಿ ದೇವಸ್ಥಾನ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯಾಗಿ ಅರವಿಂದ ಸುತಗುಂಡಿ, ಮೈಸೂರು ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯಾಗಿ ಸಿ.ಜಿ. ಕೃಷ್ಣ ಹಾಗೂ ಉಪಕಾರ್ಯದರ್ಶಿಯಾಗಿ ಎಂ. ಬಸವರಾಜು ಅವರನ್ನು ನಿಯೋಜಿಸಲಾಗಿದೆ. ಕಂದಾಯ ಇಲಾಖೆ (ಧಾರ್ಮಿಕ ದತ್ತಿ) ಆದೇಶ ಹೊರಡಿಸಿದೆ.
ಇನ್ನು, ಬೆಂಗಳೂರು ಗ್ರಾಮಾಂತರದ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಉಪಕಾರ್ಯದರ್ಶಿಯಾಗಿ ಎಂ. ನಾರಾಯಣಸ್ವಾಮಿ (ಪ್ರಭಾರ ಕಾರ್ಯದರ್ಶಿ) ಅವರನ್ನು ನೇಮಿಸಲಾಗಿದೆ.