ಯರೇಬೂದಿಹಾಳದಲ್ಲಿ ಮೊಹರಂ ಹಬ್ಬ ಆಚರಣೆ

29 Sanshi 1 moharam
Published on

ಸಂಶಿ: ಸಮೀಪದ ಯರೇಬೂದಿಹಾಳ ಗ್ರಾಮದಲ್ಲಿ ಶನಿವಾರ ವಿಶೇಷ ರೀತಿಯಲ್ಲಿ ಮೊಹರಂ ಹಬ್ಬ ಆಚರಿಸಲಾಯಿತು.


ಗ್ರಾಮದ ಮಸೀದಿಯಲ್ಲಿ ಮುಲ್ಲಾ ಸಾಹೇಬರಿಂದ ಆಲೈ ದೇವರಿಗೆ ಪೂಜೆ ಮಾಡಿದ ನಂತರ ಅಗ್ನಿಕುಂಡದಲ್ಲಿ ಹಾಯ್ದು ಗ್ರಾಮದಲ್ಲಿ ಮೆರವಣಿಗೆಗೆ ತೆರಳಲಾಯಿತು. ಪ್ರಮುಖ ಬೀದಿಗಳಲ್ಲಿ ಹೆಜ್ಜೆ ಮೇಳ, ಕೋಲು ಮೇಳ, ಮುಳ್ಳು ಹೆಜ್ಜೆ, ಯುವಕರ ಡಿಜೆ ಮೇಳದೊಂದಿಗೆ ಪಾಂಜಾಗಳ ಮೆರವಣಿಗೆ ನಡೆಯಿತು.

ಇದಾದ ನಂತರ ಅದೇ ಮಾರ್ಗದ ಮುಖಾಂತರ ಮತ್ತೆ ಮಸೀದಿಗೆ ದೇವರನ್ನು ಮರಳಿ ತರಲಾಯಿತು. ಸಂಜೆ 5 ಗಂಟೆಗೆ ಪುನಃ ದೇವರುಗಳ ಮೆರವಣಿಗೆ ಹೊರಟಿತು. ಸುಮಂಗಲೆಯರು ಬೀಬಿ ಫಾತಿಮಾ, ಹಸೇನ್, ಹುಸೇನ್ ದೇವರುಗಳಿಗೆ ನೈವೇದ್ಯ ಅರ್ಪಿಸಿದರು.

ರಾತ್ರಿ 10 ಗಂಟೆ ನಂತರ ಕೆರೆಗೆ ತಲುಪಿ, ಅಲ್ಲಿ ದೇವರನ್ನು ತೊಳೆದು ಅಲ್ವಿದಾ ಹೇಳುತ್ತಾ ಮಸೀದಿಗೆ ಬಂದು ತಲುಪಿದರು.
ಅಂಜುಮನ್ ಕಮಿಟಿ ಅಧ್ಯಕ್ಷ ಇಸ್ಮಾಯಿಲ್​ಸಾಬ್ ಡಗಲಿ, ಗ್ರಾಪಂ ಅಧ್ಯಕ್ಷ ಪ್ರವೀಣ್ ಗಾಣಿಗೇರ, ಮಹದೇವಪ್ಪ ಪೂಜಾರ, ಮೌಲಾಸಾಬ್ ಹಗೇದ, ಭರಮ ರೆಡ್ಡಿ ಗೋವಣ್ಣವರ, ಆಸೀಂಸಾಬ್ ಬನ್ನೂರ, ಜಂಗ್ಲಿಸಾ ಬೆಂತೂರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net