ಕೊಲೆಗಾರರಿಗೆ ಜೀವಾವಧಿ ಶಿಕ್ಷೆಗೆ ಒಳಪಡಿಸಿ

Untitled design(7)
Published on

ಮಾನ್ವಿ: ಮುದ್ಲಾಪುರ ಗ್ರಾಮದ ದಲಿತ ಸಮುದಾಯದ ಕಾಂಗ್ರೆಸ್ ಪಕ್ಷದ ಮುಖಂಡ ಪ್ರಸಾದ ಮದ್ಲಾಪುರ ಹತ್ಯೆಯನ್ನು ಖಂಡಿಸಿ ಮಾದಿಗ ಮತ್ತು ಛಲವಾದಿ ಸಮುದಾಯದವರು ಪಟ್ಟಣದ ಅಂಬೇಡ್ಕರ ವೃತ್ತದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್ ಪಕ್ಷದ ಮುಖಂಡ ಪ್ರಸಾದ ಮದ್ಲಾಪುರ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ

ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ವಿಫಲವಾಗಿದೆ. ಹಾಗಾಗಿ ಪಿಐ ವೀರಭದ್ರಯ್ಯ ಹಿರೇಮಠ ಹಾಗೂ ಡಿವೈಎಸ್ಪಿ ಅವರನ್ನು ಅಮಾನತು ಮಾಡಬೇಕು. ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಬೇಕು. ಪ್ರಸಾದ್ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ಹಾಗೂ ಸರ್ಕಾರಿ ಭೂಮಿ ಹಾಗೂ ಪರಿಹಾರಧನ ನೀಡಬೇಕು. ಕೊಲೆ ಮಾಡಿದ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಗೆ ಒಳಪಡಿಸಬೇಕು. ಈ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕು ದಲಿತ ಸಂಘಟನೆ ಒಕ್ಕೂಟದ ಮುಖಂಡರು ಆಗ್ರಹಿಸಿದರು.

ಪ್ರಸಾದ ಹತ್ಯೆಯ ಪ್ರಕರಣದ ಈಗಾಗಲೇ ಏಳು ಜನ ಆರೋಪಿಗಳು ಬಂಧನ ಮಾಡಲಾಗಿದೆ. ಇನ್ನುಳಿದ ಪ್ರಮುಖ ಆರೋಪಿಗಳನ್ನು ಸಹ ಬಂಧನಕ್ಕೆ ಒಳಪಡಿಸಬೇಕು. ಕೊಲೆಗಾರರ ಮೊಬೈಲ್ ಸಂಭಾಷಣೆ ಪತ್ತೆ ಹಚ್ಚಬೇಕು. ಕೊಲೆ ಪ್ರಕರಣದ ಪ್ರತ್ಯಕ್ಷ ಸಾಕ್ಷಿದಾರನಿಗೆ ಹಾಗೂ ದಲಿತ ಕುಟುಂಬಗಳಿಗೆ ಸೂಕ್ತ ಪೊಲೀಸ್ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು. ತಹಸೀಲ್ದಾರ್ ರಾಜು ಪಿರಂಗಿಗೆ ಮನವಿ ಸಲ್ಲಿಸಿದರು.

ದಲಿತ ಮುಖಂಡರಾದ ಎ.ಬಾಲಸ್ವಾಮಿ ಕೊಡ್ಲಿ, ಅಂಬಣ್ಣ ಆರೋಲಿಕರ್, ಎಂ.ವಿರೂಪಾಕ್ಷಿ, ರವೀಂದ್ರನಾಥ ಪಟ್ಟಿ, ರವೀಂದ್ರ ಜಲ್ದಾರ, ಎಂ.ಆರ್.ಭೇರಿ, ಕೆ.ಬಸವಂತಪ್ಪ, ಆರ್. ಬೋನವೆಂಚರ್, ಯಲ್ಲಪ್ಪ, ನರಸಪ್ಪ ದಂಡೋರಾ, ವಿಜಯರಾಣಿ, ಸನ್ನಿ ಮಹಾರಾಜ, ಸುಂದರ ಕಪಗಲ್, ಸಿದ್ರಾಮಪ್ಪ ನೀರಮಾನ್ವಿ, ಹುಸೇನಪ್ಪ ಜಗ್ಲಿ. ಶಾಂತಪ್ಪ ಕಪಗಲ್, ತಿಪ್ಪಣ್ಣ ಬಾಗಲವಾಡ, ಚಂದ್ರಶೇಖರ ಕುರ್ಡಿ, ಹನುಮೇಶ ಮದ್ಲಾಪುರು, ವಸಂತ ಕೊಡ್ಲಿ, ಶಿವರಾಜ ಜಾನೇಕಲ್, ಅನಿಲ್ ಕುಮಾರ, ಚಿನ್ನಪ್ಪ ಪಟ್ಟದಕಲ್, ಜೆ.ಎಚ್.ದೇವರಾಜ್, ಪಿ.ರವಿಕುಮಾರ, ಬಸವರಾಜ ನಕ್ಕುಂದಿ, ಯಲ್ಲಪ್ಪ ಬಾದರದಿನ್ನಿ, ಹನುಮಂತ ಕೋಟೆ, ಲಕ್ಷ್ಮಣ ಜಾನೇಕಲ್, ಜಯಪ್ರಕಾಶ, ಪ್ರವೀಣಕುಮಾರ, ಆಕಾಶ ಮ್ಯಾತ್ರಿ, ಪರಶುರಾಮ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net