ಭಕ್ತಿಯ ಮಾರ್ಗದಿಂದ ದೈವ ಶಕ್ತಿ

Untitled design (40)
ಮುದಗಲ್ ಉಳಿಮೇಶ್ವರದ ಸತ್ಯಮ್ಮ ದೇವಿ ದೇವಸ್ಥಾನ ಉದ್ಘಾಟನೆ ಅಂಗವಾಗಿ ಏರ್ಪಡಿಸಿದ್ದ ಧಾರ್ಮಿಕ ಸಭೆಯನ್ನು ಮಾಜಿ ಶಾಸಕ ಡಿ.ಎಸ್.ಹೂಲಗೇರಿ ಉದ್ಘಾಟಿಸಿದರು. ಅಮರನಾಥೇಶ್ವರ ಮಠದ ಪೀಠಾಧೀಶೆ ಜುನಾ ಅಖಾಡ ಮಾತೆ, ಹಿಮಾಲಯ ಪೀಠಾಧೀಶ ಅನಂತ ವಿಭೂಷಣ ಶವಂಗಿನಂದ ಗಿರಿ ಮಹಾರಾಜ, ಸುಳೆಕಲ್‌ನ ಭುವನೇಶ್ವರ ತಾತ, ಪ್ರಮುಖರಾದ ಸಿದ್ದು ಬಂಡಿ, ಶಶಿಕಲಾ ಭೋವಿ, ಸತ್ಯಪ್ಪ ನೀರಾವರಿ ಇತರರಿದ್ದರು.
Published on

ಮುದಗಲ್: ದೈವ ಹಾಗೂ ಧಾರ್ಮಿಕ ಕಾರ್ಯಕೈಗೊಳ್ಳಲು ಭಕ್ತಿ ಅತ್ಯಗತ್ಯ ಎಂದು ಮಾಜಿ ಶಾಸಕ ಡಿಎಸ್.ಹೂಲಗೇರಿ ಹೇಳಿದರು.
ಸಮೀಪದ ಉಳಿಮೇಶ್ವರದಲ್ಲಿ ಸತ್ಯಮ್ಮ ದೇವಿ ದೇವಸ್ಥಾನ ಉದ್ಘಾಟನೆ ಅಂಗವಾಗಿ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಂಗಳವಾರ ಮಾತನಾಡಿದರು. ಭಕ್ತಿಯೊಂದಿಗೆ ಭೋವಿ ಸಮುದಾಯದ ಅನೇಕರು ಒಗ್ಗಟ್ಟಿನಿಂದ ದೇವಸ್ಥಾನ ನಿರ್ಮಾಣ ಮಾಡಿರುವುದು ಶ್ಲಾಘನೀಯ. ಭಕ್ತಿಯಿಂದ ದೈವ ಶಕ್ತಿ ಲಭಿಸುತ್ತದೆ ಎಂದರು.

ಅಮರನಾಥೇಶ್ವರ ಮಠದ ಪೀಠಾಧೀಶೆ ಜುನಾ ಅಖಾಡ ಮಾತೆ, ಹಿಮಾಲಯ ಪೀಠಾಧೀಶ ಅನಂತ ವಿಭೂಷಣ ಶವಂಗಿನಂದ ಗಿರಿ ಮಹಾರಾಜ, ಸುಳೆಕಲ್‌ನ ಭುವನೇಶ್ವರ ತಾತ, ಪ್ರಮುಖರಾದ ಸಿದ್ದು ಬಂಡಿ, ಶಶಿಕಲಾ ಭೋವಿ, ಸತ್ಯಪ್ಪ ನೀರಾವರಿ, ಸತೀಶ ಭೋವಿ, ನಾಗಲಾಪುರ ಪಿಎಸ್‌ಎಸ್‌ಎನ್ ಅಧ್ಯಕ್ಷ ಶರಣಬಸವರಾಜ ಗೌಡ ವ್ಯಾಕರನಾಳ, ಸಣ್ಣ ದುರಗಪ್ಪ ಬಂಡಿ, ರಾಮಣ್ಣ ವ್ಯಾಸನಂದಿಹಾಳ, ಶರಣಪ್ಪ ವಡ್ಡರ್, ಹನುಮಂತ ನೀರಾವರಿ, ರಾಜು ಲೆಕ್ಕಿಹಾಳ, ಸತ್ಯಪ್ಪ, ಸಣ್ಣ ಯಂಕಪ್ಪ, ದುರಗಪ್ಪ ಸೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net