ಸೇಂಟ್ ಕ್ಷೇವಿಯರ್ ಕಾಲೇಜು ವಿರುದ್ಧ ಕ್ರಿಮಿನಲ್ ಕ್ರಮಕ್ಕೆ ದೂರು: ಆಡಳಿತ ಮಂಡಳಿ ಎಸಗಿದ ಪ್ರಮಾದವೇನು ಗೊತ್ತಾ?

BCU
Published on

ಬೆಂಗಳೂರು ಹೊಸ ಕಾಲೇಜು ಆರಂಭಿಸಲು ಅವಶ್ಯವಿರುವ ಸಂಯೋಜನೆ ಪಡೆಯುವುದಕ್ಕಾಗಿ ವಿಶ್ವವಿದ್ಯಾಲಯಕ್ಕೆ ಹಾಗೂ ಸರ್ಕಾರಕ್ಕೆ ನಕಲಿ ದಾಖಲೆಗಳನ್ನು ಒದಗಿಸಿರುವ ಸೇಂಟ್ ಕ್ಷೇವಿಯರ್ ಎಜುಕೇಷನಲ್ ಮತ್ತು ಚಾರಿಟಬಲ್ ಟ್ರಸ್ಟ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಾನೂನು ಕ್ರಮ ಜರುಗಿಸುವಂತೆ ಕೋರಿ ಬೆಂಗಳೂರು ನಗರ ವಿಶ್ವವಿದ್ಯಾಲಯವು ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ನೀಡಿದೆ.

ಸೇಂಟ್ ಕ್ಷೇವಿಯರ್ ಎಜುಕೇಷನಲ್ ಸಂಸ್ಥೆಯು ಸಂಜೀವನಗರ ಪೊಲೀಸ್ ಸ್ಟೇಷನ್ ಸಮೀಪವಿರುವ ಸಿಂಡಿಕೇಟ್ ಬ್ಯಾಂಕ್‌ನ 2ನೇ ಮಹಡಿಯಲ್ಲಿ ಹೊಸ ಕಾಲೇಜು ಆರಂಭಿಸಲು ಮುಂದಾಗಿದೆ.

2022-23ನೇ ಸಾಲಿನಲ್ಲಿ ಶೈಕ್ಷಣಿಕ ಸಾಲಿನ ಕ್ಷೇವಿಯರ್ ಕಾಲೇಜನ್ನು ಹೊಸದಾಗಿ ಪ್ರಾರಂಭಿಸಲು ಬೆಂಗಳೂರು ನಗರ ವಿಶ್ವವಿದ್ಯಾಲಯದ ಮತ್ತು ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಗೆ ಹೊಸದಾಗಿ ಕಾಲೇಜನ್ನು ಆರಂಭಿಸಲು ಸಂಯೋಜನೆ ಪಡೆಯಲು ಅರ್ಜಿ ಸಲ್ಲಿಸಿದ್ದು, ಜತೆಯಲ್ಲಿ ಕಾಲೇಜಿನ ಕಟ್ಟಡದ ಭೋಗ್ಯದ ಭೊಗ್ಯದ ಪತ್ರವನ್ನು ಸಲ್ಲಿಸಿದ್ದಾರೆ.

ಈ ಪತ್ರದ ನೈಜತೆ ಪರಿಶೀಲಿಸಲು ಶಿವಾಜಿನಗರದ ಉಪ ನೋಂದಣಾಧಿಕಾರಿ ಕಚೇರಿಗೆ ಕಳುಹಿಸಲಾಗಿತ್ತು. ಕ್ವೀನ್ಸ್ ರಸ್ತೆಯಲ್ಲಿರುವ ಕೃಷಿ ತಂತ್ರಜ್ಞಾನ ಸಂಸ್ಥೆ ಮತ್ತು ಸೇಂಟ್ ಕ್ಷೇವಿಯರ್ ಎಜುಕೇಷನ್ ಮತ್ತು ಚಾರಿಟಬಲ್ ಟ್ರಸ್ಟ್ ನಡುವಿನ ಭೋಗ್ಯದ ಪತ್ರವು ನೋಂದಣಿಯಾಗಿಲ್ಲವೆಂದು ವರದಿ ಬಂದಿದೆ.

ಈ ಸಂಸ್ಥೆಯು ವಿಶ್ವವಿದ್ಯಾಲಯದ ಸಂಯೋಜನೆ ಪಡೆಯುವ ದುರುದ್ದೇಶದಿಂದ ಕ್ರಿಮಿನಲ್ ಸ್ವರೂಪದ ವಂಚನೆಯನ್ನು ಎಸಗಿದ್ದಾರೆ. ಈ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯವನ್ನು ಆತಂತಕ್ಕೆ ದೂಡಿರುವ ಸೇಂಟ್ ಕ್ಷೇವಿಯರ್ ಕಾಲೇಜಿವ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳು ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ದೂರು ನೀಡಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಸಂಯೋಜನೆ ಪಡೆಯುವುದಕ್ಕಾಗಿ ನಕಲಿ ದಾಖಲೆಗಳನ್ನು ವಿಶ್ವವಿದ್ಯಾಲಯಕ್ಕೆ ಒದಗಿಸಿದ್ದಾರೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕ್ರಮ ಜರುಗಿಸುವಂತೆ ಕೋರಲಾಗಿದೆ. ದೂರು ಸಂಬಂಧಿಸಿದ ದಾಖಲೆಗಳನ್ನು ಪೊಲೀಸ್ ಇಲಾಖೆಯು ಕೇಳಿತ್ತು. ಅವುಗಳನ್ನು ಒದಗಿಸಲಾಗಿದೆ. - ಜವರೇಗೌಡ ಟಿ., ಬೆಂ.ನಗರ ವಿವಿ ಕುಲಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net