ರೂಪಾಲಿ ತಂದ ಹಣವನ್ನು ತಾವು ತಂದಿದ್ದೇವೆಂದು ಬಿಂಬಿಸಿಕೊಳ್ಳುತ್ತಿದ್ದಾರೆ ಸೈಲ್

Mudageri gp press meet
Published on

ಕಾರವಾರ:ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ತಂದ ಹಣವನ್ನು ಹಾಲಿ ಶಾಸಕರು ತಾವು ತಂದಿರುವಂತೆ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಮುಡಗೇರಿ ಗ್ರಾಪಂ ಸದಸ್ಯ ನಂದಕಿಶೋರ ನಾಯ್ಕ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತಮಾಡಿದ ಅವರು, ಮುಡಗೇರಿಯಲ್ಲಿ ಕೈಗಾರಿಕಾ ವಸಾಹತಿಗಾಗಿ ಭೂ ಸ್ವಾಧೀನ ಪ್ರಕ್ರಿಯೆ ಕೆಐಎಡಿಬಿಯಿಂದ ನಡೆದಿತ್ತು.
ಆದರೆ, 26 ವರ್ಷಗಳಿಂದ ಪ್ರಕ್ರಿಯೆ ಪೂರ್ಣವಾಗಿರಲಿಲ್ಲ. ನಾಲ್ಕು ಎಂಎಲ್ಎ ಅವಧಿಯಲ್ಲಿ ಆಗದ ಕಾರ್ಯವನ್ನು ಹಿಂದಿನ ಶಾಸಕಿ ರೂಪಾಲಿ ನಾಯ್ಕ ಮಾಡಿದ್ದಾರೆ. ಪ್ರತಿ ಎಕರೆಗೆ 50 ಲಕ್ಷ ರೂ. ಪರಿಹಾರವನ್ನು ಆಗಿನ ಸಿಎಂ ಬಸವರಾಜ ಬೊಮ್ಮಾಯಿ, ಮುರುಗೇಶ ನಿರಾಣಿ ಅವರ ಬಳಿ ವಿನಂತಿಸಿ ತಂದರು. ಹಿಂದೆ ಪ್ರತಿ ಗುಂಟೆಗೆ 10 ಲಕ್ಷ ರೂ.‌ಕೊಡುವುದಾಗಿ ಅಧಿಕಾರಿಗಳು ಹೇಳಿದ್ದರು‌. ಬಿಜೆಪಿ ಸರ್ಕಾರ ಪರಿಹಾರವನ್ನು ಐದು ಪಟ್ಟು ಪರಿಹಾರ ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ.
ಮಾರ್ಚ್ 30 ರಂದು ಕೆಐಡಿಬಿ ಪರಿಹಾರ ಹಣ ಮಂಜೂರಾಗಿದೆ. ಆದರೆ,‌ಚುನಾವಣೆ ನೀತಿ ಸಂಹಿಲೆಯಿಂದ ಪರಿಹಾರ ವಿತರಣೆಯಾಗಿಲ್ಲ
ಈಗ ಹೊಸ ಸರ್ಕಾರ ಬಂದು 4 ತಿಂಗಳಾದರೂ ಪರಿಹಾರ ಕೊಟ್ಟಿಲ್ಲ. ಆದರೆ, ಹಾಲಿ ಶಾಸಕ ಸತೀಶ ತಾವೇ ಹಣ ತಂದಂತೆ ಬಿಂಬಿಸುತ್ತಿದ್ದಾರೆ.
ಬಾಕಿ ಉಳಿದ 132 ಎಕರೆ ಭೂಮಿ ಸ್ವಾಧೀನಕ್ಕೆ ಕ್ರಮ ವಹಿಸುವ ಬದಲು ಹಳೆಯ ಶಾಸಕರ ಕಾರ್ಯವನ್ನು ತಾವು ಮಾಡಿದ್ದೆಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದರು.
ಚುನಾವಣೆಗೂ ಪೂರ್ವ ಮುಡಗೇರಿ ಜನರಿಗೆ 50 ಲಕ್ಷ ಪರಿಹಾರ ಸಿಗದು ಎಂದು ಸೈಲ್ ಚಾಲೆಂಜ್‌ ಮಾಡಿದವರು ಇಂದು ನಾಲಿಗೆ ಹೊರಳಿಸಿದ್ದಾರೆ ಎಂದು ಆರೋಪಿಸಿದರು.
ಗ್ರಾಪಂ ಅಧ್ಯಕ್ಷ ಸುರೇಂದ್ರ ಗಾಂವಕರ್ ಮಾತನಾಡಿ, ದಾಖಲೆ ಒದಗಿಸಲು ಮಧ್ಯಸ್ಥರು‌ ಹುಟ್ಟಿಕೊಂಡಿದ್ದಾರೆ ಎಂದು ಶಾಸಕ ಸೈಲ್ ಆರೋಪಿಸಿದ್ದಾರೆ.

ಇದನ್ನೂ ಓದಿ:ಕಾರವಾರದಲ್ಲಿ ಶುರುವಾಯ್ತು ಜಲಾಂತರ್ಗಾಮಿ ರಿಪೇರಿ ಮಾಡುವ ಫ್ರೆಂಚ್‌ ಕಂಪನಿ
ಆದರೆ, ಯಾರು ಕಮೀಷನ್ ಕೇಳಿದವರು ಯಾರು ಎಂದು ಸೈಲ್ ದಾಖಲೆ ಸಮೇತ ಬಹಿರಂಗಪಡಿಸಬೇಕು ಎಂದು ಸವಾಲು ಹಾಕಿದರು.
ಹಿಂದಿನ ಬಿಜೆಪಿ ಸರ್ಕಾರ ಎಂಎಲ್ ಸಿ ಕಂಪನಿ ತರುವುದಾಗಿ ಹೇಳಿತ್ತು. ಆದರೆ, ಈಗ ಸಣ್ಣ ಫ್ಲಾಟ್ ಮಾಡುವುದಾಗಿ ಶಾಸಕರು ಹೇಳುತ್ತಿದ್ದಾರೆ. ಆದರೆ, ನಮಗೆ ದೊಡ್ಡ ಕಂಪನಿ ಬರಬೇಕು ಎಂದು ಒತ್ತಾಯಿಸಿದರು. ಉಪಾಧ್ಯಕ್ಷೆ ಜ್ಯೋತಿ ಚೋಳಾರ್,
ಸದಸ್ಯರಾದ ಸುನೀಲ ನಾಯ್ಕ, ಸೀಮಾ ನಾಯ್ಕ,
ಗ್ರಾಮಸ್ಥ ಭಿಕಾಜಿ ಗಾಂವಕರ್, ಜಾನ್ ಫರ್ನಾಂಡಿಸ್, ಕದ್ರಿನಾಥ ಅಲ್ಫಾನ್ಸೋ, ಆನಂದು ನಾಯ್ಕ,ವಿದ್ಯಾ ಗುರವ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net