ಕಾರವಾರದಲ್ಲಿ ಶುರುವಾಯ್ತು ಜಲಾಂತರ್ಗಾಮಿ ರಿಪೇರಿ ಮಾಡುವ ಫ್ರೆಂಚ್‌ ಕಂಪನಿ

FOK-KM-ramakrishna-visit-to-naval-group-France-industry
Published on

ಕಾರವಾರ: ಕಲ್ವಾರಿ ಕ್ಲಾಸ್ ಜಲಾಂತರ್ಗಾಮಿ ಗಳ ರಿಪೇರಿ ಹಾಗೂ ನಿರ್ವಹಣೆ ಮಾಡಬಲ್ಲ ಕೈಗಾರಿಕೆಯೊಂದು ಇಲ್ಲಿನ ಶಿರವಾಡ ಕೈಗಾರಿಕಾ ವಲಯದಲ್ಲಿ ಪ್ರಾರಂಭವಾಗಿದೆ.
ಪ್ರಾನ್ಸ್ ಸರ್ಕಾರದ ಮಾಲೀಕತ್ವದ ನೇವಲ್ ಗ್ರೂಪ್ ಫ್ರಾನ್ಸ್‌ ಇಲ್ಲಿನ ಕದಂಬ ನೌಕಾ ನೆಲೆಯ ಯುದ್ಧ ನೌಕಾ ರಿಪೇರಿ ಪ್ರಾಂಗಣದ ಜತೆ ಒಪ್ಪಂದ ಮಾಡಿಕೊಂಡು ಘಟಕವನ್ನು ಇಲ್ಲಿ ಸ್ಥಾಪಿಸಿದೆ. ಕರ್ನಾಟಕ ನೌಕಾ ವಲಯ ಮುಖ್ಯಸ್ಥ ರಿಯರ್ ಅಡ್ಮಿರಲ್ ಕೆ.ಎಂ.ರಾಮಕೃಷ್ಣ ಘಟಕಕ್ಕೆ ಚಾಲನೆ ನೀಡಿದರು. ನೌಕಾಸೇನೆಗೆ ಸಂಬಂಧಿಸಿದ ಕೈಗಾರಿಕೆಗಳನ್ನು ಪ್ರಾರಂಭಿಸುವ ಸಂಬಂಧ ಪ್ರಯತ್ನ ನಡೆದಿದ್ದು, ಮೊದಲ ಕೈಗಾರಿಕೆ ಇಲ್ಲಿ ಪ್ರಾರಂಭವಾದಂತಾಗಿದೆ.

ಇದನ್ನೂ ಓದಿ:ಕೋಸ್ಟ್‌ ಗಾರ್ಡ್‌ ನಿಂದ 8 ಹೊಸ ಹೊಸ ಹೆಲಿಕಾಫ್ಟರ್‌ಗಾಗಿ ಪ್ರಸ್ತಾವನೆ ಸಲ್ಲಿಕೆ
ಮೇಕ್ ಇನ್ ಇಂಡಿಯಾ ಭಾಗವಾಗಿ ಸ್ಥಳೀಯ ಕೈಗಾರಿಕೆಗಳನ್ನು ಉತ್ತೇಜಿಸುವ ಭಾಗ ಇದಾಗಿದೆ ಎಂದು ಕರ್ನಾಟಕ ನೌಕಾ ವಲಯ ತನ್ನ `ಎಕ್ಸ್' ಖಾತೆಯಲ್ಲಿ ತಿಳಿಸಿದೆ. ನೇವಲ್ ಗ್ರೂಪ್ ಪ್ರಾನ್ಸ್ ಈಗಾಗಲೇ ಡಿಆರ್‌ಡಿಒ ಹಾಗೂ ಮಝಗಾಂವ ಡಾಕ್ ಯಾರ್ಡ್ ಮುಂತಾದೆಡೆ ಒಪ್ಪಂದ ಮಾಡಿಕೊಂಡು ಜಲಾಂತರ್ಗಾಮಿ, ಹಡಗುಗಳ ನಿರ್ಮಾಣ ಮುಂತಾದ ಕಾರ್ಯಗಳನ್ನು ನೆರವೇರಿಸುತ್ತಿದೆ.

ವಿವರಗಳಿಗಾಳಿ ಇಲ್ಲಿ ಒತ್ತಿ:  https://t.co/98bWeVbvX2
(https://twitter.com/IN_KTKNA/status/1702004221082747243?t=8eaDktE41iPL4aqSIP576Q&s=03

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net