ಮುಡಾ ಅವ್ಯವಹಾರ ದೇಶವನ್ನೇ ಬೆಚ್ಚಿ ಬೀಳಿಸಿದ ಹಗರಣ : ವಿಪಕ್ಷ ನಾಯಕ ಆರ್.ಅಶೋಕ್

R Ashoka
Published on

ವಿಜಯವಾಣಿ ಸುದ್ದಿಜಾಲ ಉಡುಪಿ

ಮುಡಾ ಅವ್ಯವಹಾರ ದೇಶವನ್ನೇ ಬೆಚ್ಚಿ ಬೀಳಿಸಿದ ಬೃಹತ್ ಹಗರಣ. 86 ಸಾವಿರ ಜನರು ಅರ್ಜಿ ಹಾಕಿ ಸೈಟ್ ಸಿಗದೇ ಕಾಯುತ್ತಿರುವಾಗ, ಸಿಎಂ ಸಿದ್ದರಾಮಯ್ಯಗೆ ಏಕಾಏಕಿ ಮುಡಾ ಸೈಟ್ ಕೊಡಲಾಗಿದೆ. ಖುದ್ದು ಮುಖ್ಯಮಂತ್ರಿಗಳೇ ದಲಿತರ ಜಮೀನು ನುಂಗಿದ್ದಾರೆ ಎಂದು ವಿಧಾನಸಭಾ ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದರು.

ಉಡುಪಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಲಿತರಿಗೆ ಸಿಗಬೇಕಿದ್ದ ಜಮೀನನ್ನು ಯಾರದ್ದೋ ಹೆಸರಿಗೆ ವರ್ಗಾಯಿಸಿ ಮಂಜೂರು ವಾಡಿಸಿಕೊಂಡಿದ್ದಾರೆ. ಆದರೂ ಸಿದ್ದರಾಮಯ್ಯ ತಾನು ಆ ಜಮೀನನ್ನೇ ನೋಡಿಲ್ಲ ಎನ್ನುತ್ತಿದ್ದಾರೆ. ಅವರ ಜಮೀನು ಮುಟ್ಟುವ ಧೈರ್ಯ ಮುಡಾಗೆ ಇದೆಯಾ? ಎಂದು ಪ್ರಶ್ನಿಸಿದರು.

ವಾಲ್ಮೀಕಿ ನಿಗಮದಲ್ಲೂ ದಲಿತರಿಗೆ ಮಂಜೂರಾಗಿದ್ದ ಕೋಟ್ಯಂತರ ರೂ.ವನ್ನು ಸರ್ಕಾರ ಲೂಟಿ ವಾಡಿದೆ. ದಲಿತರ ಹಣವನ್ನು ಬಾರ್, ವೈನ್‌ಶಾಪ್, ಚಿನ್ನದ ಅಂಗಡಿಗಳಿಗೆ ಸುರಿದಿದ್ದಾರೆ. ದಲಿತರ ಅನುದಾನದ ಹಣದಿಂದಲೇ ಜಮೀನು ಖರೀದಿ ವಾಡಿದ್ದಾರೆ. ರಾಜ್ಯದ ಇತಿಹಾಸದಲ್ಲಿ ಈ ಪ್ರವಾಣದಲ್ಲಿ ದಲಿತರ ಹಣ ನುಂಗಿದ ಕುಖ್ಯಾತಿಗೆ ಕಾಂಗ್ರೆಸ್ ಸರ್ಕಾರಕ್ಕೆ ಬಂದಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಭಾರಿ ನಷ್ಟವಾಗಿದೆ. ಸಿದ್ದರಾಮಯ್ಯ ತಕ್ಷಣವೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅದಕ್ಕೂ ಮೊದಲು ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಬೇಕು ಎಂದರು.

ಅಧಿವೇಶನದಲ್ಲಿ ಹೋರಾಟ

ಕಾವೇರಿ ವಿಚಾರದಲ್ಲಿ ವಿರುದ್ಧ ತೀರ್ಪು ಬರುತ್ತಿದೆ. ಕರ್ನಾಟಕದ ಪರವಾಗಿ ಸರಿಯಾಗಿ ವಾದ ನಡೆದಿಲ್ಲ. ರೈತರು ನೂರಾರು ದಿನದಿಂದ ಧರಣಿ ವಾಡುತ್ತಿದ್ದರೂ ಸೌಜನ್ಯಕ್ಕೂ ಅವರನ್ನು ಕರೆದು, ಸಿದ್ದರಾಮಯ್ಯ ವಾತನಾಡಿಲ್ಲ ಎಂದು ಅಶೋಕ್ ಕುಟುಕಿದರು. ಕಾಂಗ್ರೆಸ್ ಸರ್ಕಾರ ಕದ್ದುಮುಚ್ಚಿ ತಮಿಳುನಾಡಿಗೆ ನೀರು ಬಿಡುತ್ತಿದೆ. ಕಾಂಗ್ರೆಸ್ ಸಚಿವರೆಲ್ಲ ಕುರ್ಚಿ ಕಾದಾಟದಲ್ಲಿ ಮುಳುಗಿದ್ದಾರೆ. ಸಿಎಂ, ಡಿಸಿಎಂ ಯಾರಾಗಬೇಕೆಂದು ಕಚ್ಚಾಡುತ್ತಿದ್ದಾರೆ. ರೈತ ಸಂದವರು ತನ್ನನ್ನು ಮತ್ತು ಎಚ್.ಡಿ. ಕುವಾರಸ್ವಾಮಿ ಅವರನ್ನು ಭೇಟಿ ವಾಡಿದ್ದು, ಸಭೆ ನಡೆಸಿದ್ದೇವೆ. ಸೋಮವಾರದಿಂದ ನಡೆಯುವ ಅಧಿವೇಶನದಲ್ಲಿ ಜೆಡಿಸ್ ಶಾಸಕರ ಸಹಕಾರದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ವಾಡುತ್ತೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net