ವರ್ಷಕ್ಕೊಮ್ಮೆಯಾದರೂ ನೇತ್ರ ಪರೀಕ್ಷೆ ಮಾಡಿಸಿ

IMG-20240829-WA0168
Published on

ಸಾಲಿಗ್ರಾಮ: ಕಣ್ಣು ತುಂಬಾ ಸೂಕ್ಷ್ಮಅಂಗವಾಗಿದ್ದು, ಇವುಗಳ ಸುರಕ್ಷತೆಗೆ ಯಾರೂ ನಿರ್ಲಕ್ಷೃ ಮಾಡಬಾರದು ಎಂದು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಅಶೋಕ್ ಹೇಳಿದರು.


ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗುರುವಾರ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆಯಿಂದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಉಚಿತ ಶಿಬಿರದಲ್ಲಿ ಮಾತನಾಡಿದರು. ಉತ್ತಮ ದೃಷ್ಟಿಯನ್ನು ಹೊಂದಿದ್ದರೂ ಮತ್ತು ಓದುವಿಕೆಯಲ್ಲಿ ಯಾವುದೇ ತೊಂದರೆ ಇಲ್ಲದಿದ್ದರೂ ಕನಿಷ್ಠ ವರ್ಷಕ್ಕೊಮ್ಮೆಯಾದರೂ ಕಣ್ಣುಗಳನ್ನು ಪರೀಕ್ಷಿಸಿ. ಇದು ಕಣ್ಣಿನ ಸಂಬಂಧಿತ ವಿವಿಧ ಕಾಯಿಲೆಗಳನ್ನು ಪತ್ತೆ ಮಾಡಲು ಹಾಗೂ ಸರಿಯಾದ ಚಿಕಿತ್ಸೆ ನೀಡಿ ಅದನ್ನು ತಡೆಯಲು ಅನುಕೂಲವಾಗಲಿದೆ ಎಂದರು.


ರೈತರು ಹೊಲ-ಗದ್ದೆಗಳಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಗೊತ್ತಿಲ್ಲದ ರೀತಿ ಅವಘಡಗಳು ನಡೆಯುವ ಸಾಧ್ಯತೆ ಇರುತ್ತದೆ. ಮಧುಮೇಹ ಮತ್ತು ರಕ್ತದೊತ್ತಡ ಇರುವವರು ಪ್ರತಿ ಆರು ತಿಂಗಳಿಗೊಮ್ಮೆ ಪರೀಕ್ಷೆ ಮಾಡಿಡಬೇಕು ಎಂದು ಹೇಳಿದರು.


ಶಸ್ತ್ರ ಚಿಕಿತ್ಸೆ ಅಗತ್ಯವಿದ್ದವರನ್ನು ಮೈಸೂರಿನ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆಯ ಸಂಚಾರಿ ನಿಯಂತ್ರಣ ಘಟಕಕ್ಕೆ ಕರೆದೊಯ್ಯಲಾಯಿತು. ಡಾ.ಚೇತನ್ ಕುಮಾರ್, ಡಾ.ಸೌಂದರ್ಯಾ, ಡಾ.ರೆಹಾನ್, ಎ.ಎಸ್.ಮಂಜುನಾಥ, ಕೆ.ಎಸ್.ಶೇಖರ್, ಶಿಬಿರದ ಸಂಘಟಕ ಕೆ.ಟಿ.ಮೋಹನ್ ಕುಮಾರ್, ಪ್ರಯೋಗ ಶಾಲಾ ತಂತ್ರಜ್ಞರಾದ ಆರ್.ಶಿವಕುಮಾರ್, ಶ್ರೀಮಂತ್, ಎನ್‌ಸಿಡಿ ವಿಭಾಗದ ಆಪ್ತ ಸಮಾಲೋಚಕ ಲಕ್ಷ್ಮಣ, ಆಸ್ಪತ್ರೆ ಸಿಬ್ಬಂದಿ ಶಶಿಯಮ್ಮ, ಸಿದ್ದು, ಅಶ್ವಿನಿ, ರೂಪಾ, ಮಧು, ರಾಮಲಿಂಗಪ್ಪ, ಕಾಂತರಾಜು, ಅರವಿಂದ, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net