ಎಂಎಸ್‌ಐಎಲ್ ಮದ್ಯದಂಗಡಿ ತೆರವಿಗೆ ಗ್ರಾಮಸ್ಥರ ಆಗ್ರಹ

ಕುಕನೂರು ತಾಲೂಕಿನ ಕುದರಿಮೋತಿ ಗ್ರಾಮದಲ್ಲಿ ಮದ್ಯದಂಗಡಿ ತೆರೆಯದಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಗ್ರಾಮಸ್ಥರಾದ ಶ್ರೀಧರ್ ದಾಸರ, ಮಂಜುನಾಥ ಕಿನ್ನಾಳ, ಮಂಜುನಾಥ ಗಟ್ಟೆಪ್ಪನವರ, ಮಂಜು ಸಜ್ಜನ್ ಇದ್ದರು.
ಕುಕನೂರು ತಾಲೂಕಿನ ಕುದರಿಮೋತಿ ಗ್ರಾಮದಲ್ಲಿ ಮದ್ಯದಂಗಡಿ ತೆರೆಯದಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಗ್ರಾಮಸ್ಥರಾದ ಶ್ರೀಧರ್ ದಾಸರ, ಮಂಜುನಾಥ ಕಿನ್ನಾಳ, ಮಂಜುನಾಥ ಗಟ್ಟೆಪ್ಪನವರ, ಮಂಜು ಸಜ್ಜನ್ ಇದ್ದರು.
Published on

ಕುಕನೂರು: ಗ್ರಾಮದಲ್ಲಿ ಮದ್ಯದಂಗಡಿ ತೆರೆಯಬಾರದು ಎಂದು ದೂರು ನೀಡಿದರು ಸಹ ವಿರೋಧದ ಮಧ್ಯೆ ಪ್ರಾರಂಭಗೊಳ್ಳುತ್ತಿರುವ ಮದ್ಯದಂಗಡಿಗೆ ತಾಲೂಕಿನ ಕುದರಿಮೋತಿ ಗ್ರಾಮಸ್ಥರು ಕಲ್ಲು ಒಡೆದು ಶನಿವಾರ ಪ್ರತಿಭಟನೆ ನಡೆಸಿದರು.

ಗ್ರಾಮಸ್ಥರ ವಿರೋಧದ ಮಧ್ಯೆ ಗ್ರಾಮದಲ್ಲಿ ಮದ್ಯದಂಗಡಿ ತೆರೆಯಲು ಸಿದ್ಧತೆ ನಡೆದಿದ್ದು, ಇದಕ್ಕೆ ಅಬಕಾರಿ ಇಲಾಖೆಯೇ ಸಮ್ಮತಿ ನೀಡಿದೆ ಎಂಬ ಅನುಮಾನ ಇದೆ. ಗ್ರಾಮದ ಮಹಿಳೆಯರು, ಯುವಕರು ಸೇರಿ ಬೇವೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.

ಗ್ರಾಮಕ್ಕೆ ಅಬಕಾರಿ ಇಲಾಖೆ ಅಧಿಕಾರಿಗಳು ಪರಿಶೀಲನೆಗೆ ಬಂದಾಗ ಗ್ರಾಮಸ್ಥರು ನಮ್ಮೂರಲ್ಲಿ ಮದ್ಯದಂಗಡಿ ಯಾವುದೇ ಕಾರಣಕ್ಕೂ ಬೇಡ ಅಂತ ವಿರೋಧ ವ್ಯಕ್ತಪಡಿಸಲಾಗಿತ್ತು.

ಯಾರಿಗೂ ತಿಳಿಯದ ರೀತಿಯಲ್ಲಿ ಮಳಿಗೆಯಲ್ಲಿ ಮದ್ಯ ಶೇಖರಣೆ ಮಾಡುತ್ತಿದ್ದಾರೆ. ಅಲ್ಲದೇ ಶಾಸಕ ಬಸವರಾಜ ರಾಯರಡ್ಡಿ ಅವರು ಅಬಕಾರಿ ಇಲಾಖೆಗೆ ಪತ್ರ ಬರೆದಿದ್ದಾರೆ. ಆದರೂ, ಮದ್ಯದಂಗಡಿ ಪ್ರಾರಂಭಿಸಲು ಮುಂದಾಗಿದ್ದು, ಕೂಡಲೇ ಮದ್ಯದಂಗಡಿ ಬಂದ್ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ಗ್ರಾಮಸ್ಥರಾದ ಶ್ರೀಧರ್ ದಾಸರ, ಮಂಜುನಾಥ ಕಿನ್ನಾಳ, ಮಂಜುನಾಥ ಗಟ್ಟೆಪ್ಪನವರ,
ಮಂಜು ಸಜ್ಜನ್, ಪಕೀರಪ್ಪ ಚೌಡ್ಕಿ, ಗವಿ ನಾಗಲಿಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net