17ರಂದು ಮೃತ್ಯುಂಜಯ ಹೋಮ

Published on

ಕುಶಾಲನಗರ: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಶ್ರೀ ಉಮಾಮಹೇಶ್ವರ ಕ್ಷೇತ್ರದ ಮಹಾದೇವಿ ಸನ್ನಿಧಿಯಲ್ಲಿ ಅ.17ರಂದು ಮೃತ್ಯುಂಜಯ ಹೋಮ ಮತ್ತು ಚಂಡಿಕಾ ಹೋಮ ಆಯೋಜಿಸಲಾಗಿದೆ.

ಇದರ ಅಂಗವಾಗಿ 17ರ ಬೆಳಗ್ಗೆ ಗಣಪತಿ ಹೋಮ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಜರುಗಲಿದೆ. ನಂತರ ಮೃತ್ಯುಂಜಯ ಹೋಮ, ಚಂಡಿಕಾ ಹೋಮ, ಸಂಕಲ್ಪ ಹೋಮ ಸೇರಿದಂತೆ ಹಲವು ಪೂಜಾ ಕಾರ್ಯಗಳು, ಮಹಾ ಮಂಗಳಾರತಿ ನಡೆಯಲಿದೆ. ಭಕ್ತಾದಿಗಳಿಗೆ ಮಧ್ಯಾಹ್ನ ಮತ್ತು ಸಂಜೆ ದೇವಾಲಯ ಸಮಿತಿ ವತಿಯಿಂದ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಟಿ.ಎಂ.ಚಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net