

> ಬೆಂಕಿ ನಂದಿಸಲು ಏಳು ಗಂಟೆಗೂ ಹೆಚ್ಚುಕಾಲ ಕಾರ್ಯಾಚರಣೆ
> ಪ್ರಾಣಾಪಾಯದಿಂದ ಪಾರಾದ ಸಿಬ್ಬಂದಿ
ಚನ್ನಪಟ್ಟಣ
ತಾಲೂಕಿನ ವಂದಾರಗುಪ್ಪೆ ಸಮೀಪದ ಪೌಳಿದೊಡ್ಡಿ ಗ್ರಾಮದ ಬಳಿ ಜಿಪಂನಿಂದ ನಿರ್ಮಿಸಿದ್ದ ಮೆಟೀರಿಯಲ್ ರಿಕವರಿ ಫೆಸಿಲಿಟಿ (ಎಂಆರ್ ಎಫ್ ) ಘಟಕ ಬುಧವಾರ ಬೆಂಕಿಗಾಹುತಿಯಾಗಿದೆ.
ಅವಘಡದಲ್ಲಿ ಕೋಟ್ಯಂತರ ರೂ. ನಷ್ಟವಾಗಿದೆ ಎನ್ನಲಾಗಿದ್ದು, ಸ್ಥಳಕ್ಕೆ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಜಿಪಂ ಸಿಇಒ ದಿಗ್ವಿಜಯ ಬೋಡ್ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಹಾಗೂ ಇನ್ನಿತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಜೀವ ಉಳಿಸಿದ ಚಹಾ!
ಘಟಕದಲ್ಲಿ 17 ಮಂದಿ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವಘಡ ಸಂಭವಿಸುವ ಕೆಲ ನಿಮಿಷದ ಮುಂದೆ ಇವರೆಲ್ಲರೂ ಟೀ ಕುಡಿಯುವ ಸಲುವಾಗಿ ಘಟಕದ ಹೊರಭಾಗಕ್ಕೆ ಬಂದಿದ್ದರು. ಈ ಹಿನ್ನೆಲೆಯಲ್ಲಿ ಇವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಇಲ್ಲವಾದರೆ, ಅವಘಡದಲ್ಲಿ ಪ್ರಾಣಾಪಾಯವೂ ಆಗುವ ಸಂಭವವಿತ್ತು ಎಂದು ಪ್ರತ್ಯದರ್ಶಿಗಳು ತಿಳಿಸಿದ್ದಾರೆ.
ಘಟಕಕ್ಕೆ ಬೆಂಕಿ ಹೊತ್ತಿಕೊಂಡ ತಣವೇ ಸಿಬ್ಬಂದಿ ಅಗ್ನಿಶಾಮಕ ದಳಕ್ಕೆ ಸುದ್ದಿ ಮುಟ್ಟಿಸಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ಸಿಬ್ಬಂದಿ ಸತತ ಏಳು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು. ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ಚನ್ನಪಟ್ಟಣ, ರಾಮನಗರ, ಕನಕಪುರ ಹಾಗೂ ಬೆಂಗಳೂರಿನ ಅಂಜನಾಪುರ ಅಗ್ನಿಶಾಮಕ ದಳ ನಾಲ್ಕು ವಾಹನಗಳು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದವು. ಒಣ ತ್ಯಾಜ್ಯವಿದ್ದ ಕಾರಣ ಬೆಂಕಿ ಕ್ಷಣಮಾತ್ರದಲ್ಲಿ ವ್ಯಾಪಿಸುತ್ತಿದದ್ದು ಕಾರ್ಯಾಚರಣೆಗೂ ಅಡ್ಡಿಯುಂಟು ಮಾಡುತಿತ್ತು.
ಏನಿದು ಟಕ?
ಪೌಳಿದೊಡ್ಡಿ ಗ್ರಾಮದ ಸಮೀಪ ಜಿಪಂನಿಂದ ಗ್ರಾಪಂಗಳ ನತ್ಯಾಜ್ಯದ ಸಮರ್ಪಕ ನಿರ್ವಹಣೆಗಾಗಿ ಹೊಸ ತಂತ್ರಾನ ಅಳವಡಿಸಿಕೊಂಡಿರುವ ಟಕ ನಿರ್ಮಿಸಲಾಗಿತ್ತು. ಪಂಚಾಯಿತಿಗಳ ಒಣ ಕಸವನ್ನು ಇಲ್ಲಿಗೆ ತಂದು ವ್ಯವಸ್ಥಿತವಾಗಿ ವಿಂಗಡಣೆ ಮಾಡುವುದು ಘಟಕದ ಕೆಲಸವಾಗಿತ್ತು. ಒಂದು ಎಕರೆ ಪ್ರದೇಶದಲ್ಲಿ ಸುಮಾರು 2.50 ಕೋಟಿ ರೂ. ವೆಚ್ಚದಲ್ಲಿ ಈ ಎಂಆರ್ಎಫ್ ಘಟಕ ನಿರ್ಮಾಣ ಮಾಡಲಾಗಿತ್ತು. ಮಂಗಳ ರಿಸೋರ್ಸ್ ಮ್ಯಾನೇಜ್ಮೆಂಟ್ ಎಂಬ ಖಾಸಗಿ ಕಂಪನಿ ಈ ಘಟಕದ ನಿರ್ವಹಣೆ ಹೊಣೆ ಹೊತ್ತಿತು. ಈ ಘಟಕವು ನಿತ್ಯ 10 ಟನ್ ಘನತ್ಯಾಜ್ಯವನ್ನು ವಿಂಗಡಣೆ ಮಾಡಿ ಸಂಸ್ಕರಿಸುವ ಸಾಮರ್ಥ್ಯ ಹೊಂದಿದ್ದು, ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ದೊಡ್ಡ ಯಂತ್ರಗಳ ನೆರವಿನಿಂದ ವಿಂಗಡಿಸಿ ವಿಲೇವಾರಿ ಮಾಡಲಾಗುತ್ತಿತ್ತು. ಸಾರ್ವಜನಿಕ ಘನ ತ್ಯಾಜ್ಯದ ಸಮರ್ಪಕ ನಿರ್ವಹಣಾ ಉದ್ದೇಶದ ಈ ಎಂಆರ್ಎಫ್, ರಾಜ್ಯದಲ್ಲಿ ಕಾರ್ಯಾರಂಭಿಸಿರುವ ಮೂರನೇ ಘಟಕ ಎಂಬುದು ವಿಶೇಷ.