ಕೇಂದ್ರೀಯ ವಿದ್ಯಾಲಯಕ್ಕೆ ಸಂಸದರ ಭೇಟಿ

ಕೇಂದ್ರೀಯ ವಿದ್ಯಾಲಯಕ್ಕೆ ಸಂಸದರ ಭೇಟಿ
Published on

ಹಾಸನ: ನಗರದ ಅರಸೀಕೆರೆ ರಸ್ತೆಯ ಬಿ.ಕಾಟಿಹಳ್ಳಿಯಲ್ಲಿರುವ ಕೇಂದ್ರೀಯ ವಿದ್ಯಾಲಯಕ್ಕೆ ಸಂಸದ ಶ್ರೇಯಸ್ ಪಟೇಲ್ ಗುರುವಾರ ಭೇಟಿ ನೀಡಿದರು. ಈ ವೇಳೆ ಶಾಲೆಯ ಮುಖ್ಯಸ್ಥರು ಹಾಗೂ ಮಕ್ಕಳೊಂದಿಗೆ ಮಾತುಕತೆ ನಡೆಸಿ ಕುಂದುಕೊರತೆ ಆಲಿಸಿದರು.

ಶಿಕ್ಷಕರೊಂದಿಗೆ ಪ್ರತ್ಯೇಕ ಸಮಾಲೋಚನೆ ನಡೆಸಿ ಶಾಲೆಗೆ ಬೇಕಾದ ಅಗತ್ಯ ಸೌಲಭ್ಯಗಳ ಕುರಿತು ಚರ್ಚಿಸಿದರು. ಶಾಲೆಯ ಮಕ್ಕಳೊಂದಿಗೆ ಕೆಲ ಹೊತ್ತು ಸಮಯ ಕಳೆದ ಸಂಸದರು, ಇದೊಂದು ವಿಶೇಷ ಶಾಲೆ, ಎಲ್ಲರೂ ಇಲ್ಲಿ ಪ್ರವೇಶ ಪಡೆಯಲು ಆಗಲ್ಲ ಎಂದರು. ಹೀಗಾಗಿಯೇ ಅನೇಕರು ಅವಕಾಶ ಕೇಳಿದರೂ ಸಿಗುವುದಿಲ್ಲ. ಹಾಗಾಗಿ ಕಲಿಯುವ ಮಕ್ಕಳು ಅದೃಷ್ಟ ಮಾಡಿದ್ದಾರೆ ಎಂದರು.

ಇದೇ ವೇಳೆ ವಿದ್ಯಾರ್ಥಿಗಳು ಓದಿನ ಜತೆಗೆ ಕ್ರೀಡೆಯಲ್ಲೂ ತೊಡಗಿಸಿಕೊಳ್ಳಬೇಕು. ದೈಹಿಕ ಆರೋಗ್ಯ ಚೆನ್ನಾಗಿದ್ದರೆ ಎಲ್ಲವೂ ಚೆನ್ನಾಗಿರಲಿದೆ ಎಂದರು. ಶಾಲೆಯಲ್ಲಿ ಏನೇನು ಸಮಸ್ಯೆ ಇದೆಯೋ ಅದನ್ನು ಹಂತ ಹಂತವಾಗಿ ಮುಂದಿನ ದಿನಗಳಲ್ಲಿ ಬಗೆ ಹರಿಸಲಾಗುವುದು ಎಂದು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net