

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಬಿಜೆಪಿ ಮತ್ತು ಮೋದಿ ಅಲೆಗೆ ಬೆದರಿದ್ದರಿಂದಲೇ ರಾಜ್ಯದ ವಿವಿಧ ಕ್ಷೇತ್ರಗಳಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದ ಸಚಿವರು ಹಿಂದೇಟು ಹಾಕುತ್ತಿದ್ದಾರೆ ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟಿçÃಯ ಅಧ್ಯಕ್ಷರಾಗಿರುವ ಲೋಕಸಭಾ ಸದಸ್ಯ ತೇಜಸ್ವಿಸೂರ್ಯ ಲೇವಡಿ ಮಾಡಿದರು.
ನಗರದ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರ ಜತೆ ಮಾತನಾಡಿ, ದೇಶದ ಎಲ್ಲಡೆ ಪ್ರಧಾನಿ ನರೇಂದ್ರ ಮೋದಿ ಸುನಾಮಿ ಜೋರಾಗಿದೆ. ಸ್ಪರ್ಧಿಸಿದೆ ಸೋಲುತ್ತೇವೆ ಎಂಬುದು ರಾಜ್ಯದ ಸಚಿವರಿಗೆ ಗೊತ್ತಾಗಿದೆ. ಹೀಗಾಗಿಯೇ ಅವರಿಗೆ ಈಗಲೇ ಹಲವು ಕ್ಷೇತ್ರಗಳನ್ನು ಅವರ ಪಕ್ಷದವರು ತೋರಿಸಿದರೂ ಆಸಕ್ತಿ ತೋರಿಸುತ್ತಿಲ್ಲ. ಅದಕ್ಕೆ ಕಾರಣ ಅಂದರೆ ಸೋಲಿನ ಭೀತಿ ಎಂದು ತಿರುಗೇಟು ನೀಡಿದರು.
ದೇಶದ ಬಡ ಜನರು ಪ್ರಧಾನಿ ಮೋದಿ ಹೆಸರಲ್ಲಿ ಹೊಸ ಆಶಯ ಕಾಣುತ್ತಿದ್ದಾರೆ. ಬಿಜೆಪಿ ಪರ ಒಲವು ಇರುವುದರಿಂದ ಕರ್ನಾಟಕದಲ್ಲಿ ಈ ಬಾರಿ ಕನಿಷ್ಠ ೨೫ ಸ್ಥಾನಗಳನ್ನು ಗೆಲ್ಲುತ್ತೇವೆ. ಕಳೆದ ಸಲದಂತೆ ಈ ಸಲವೂ ಬಿಜೆಪಿ ಸ್ವೀಪ್ ಆಗಲಿದೆ. ಅಧಿಕಾರಕ್ಕೆ ಬರಲಿದೆ ಎಂದರು.
ಮೋದಿ ಪ್ರಭಾವ ಇರುವುದು ಪಕ್ಕಾ ಆಗಿ ಮಂತ್ರಿಗಳಿಗೆ ಗೊತ್ತಾಗಿದ್ದರಿಂದಲೇ ಲೋಕಸಭೆ ಚುನಾವಣೆಯಲ್ಲಿ ಕಣಕ್ಕಿಯಲು ಹಿಂದೇಟು ಹಾಕುತ್ತಿದ್ದಾರೆ. ಜನರ ಮನಸ್ಸು, ಸಂಕಲ್ಪ ಮೋದಿ ಜತೆಗಿದೆ. ದೇಶದಲ್ಲಿರುವ ಮೋದಿ ಸುನಾಮಿಯನ್ನು ಯಾರು ಅಡ್ಡಗಟ್ಟಲು ಇಲ್ಲವೇ ತಡೆಯಲು ಆಗಲ್ಲ ಎಂದು ತೇಜಸ್ವಿ ಗುಡುಗಿದರು.
ಸುನಾಮಿಗೆ ತಡೆಗೋಡೆ ನಿರ್ಮಿಸಲು ಸಾಧ್ಯವೇ ಇಲ್ಲ. ಅದು ಬಂದು ಅಪ್ಪಳಿಸಿದಾಗಲೇ ಅದರ ಪರಿಣಾ ಗೊತ್ತಾಗುತ್ತದೆ. ಅಲ್ಲದೆ ಸೋಲುವಂತಹ ಎಲೆಕ್ಷನ್‌ದಲ್ಲಿ ಸ್ಪರ್ಧಿಸಲು ಯಾರು ಮುಂದಾಗುತ್ತಾರೆ ನೀವೆ ಹೇಳಿ ಎಂದು ಮಾಧ್ಯಮದವರಿಗೆ ಮರುಪ್ರಶ್ನೆ ಹಾಕಿದರು. ಅಲ್ಲದೆ ಹಗಲು ಕಂಡ ಬಾವಿಗೆ ಯಾರಾದರೂ ರಾತ್ರಿ ಬಂದು ಬಿಳುತ್ತಾರೇನು ?. ಚುನಾವಣೆಯಲ್ಲಿ ಏನಾಗುತ್ತದೆ ಎಂಬುದು ಕಾಂಗ್ರೆಸ್‌ನವರಿಗೆ ಗೊತ್ತಿದೆ. ಮೋದಿಯವರ ಪರವಾಗಿ ಜನರಿz್ದÁರೆ ಅಂತಾ ಅವರಿಗೆ ಗೊತ್ತಿದೆ. ಆ ಕಾರಣಕ್ಕಾಗಿಯೆ ಕಾಂಗ್ರೆಸ್ ಸರ್ಕಾರದ ಸಚಿವರು ಚುನಾವಣೆಗೆ ನಿಲ್ಲಲು ಮುಂದೆ ಬರುತ್ತಿಲ್ಲ ಎಂದು ಸಂಸದ ತೇಜಸ್ವಿಸೂರ್ಯ ಹೇಳಿದರು.
ಗುಲಾಮಿ ಕಾಂಗ್ರೆಸ್ ರಕ್ತದಲ್ಲಿದೆ
ಗುಲಾಮಗಿರಿ ಎಂಬುದು ಕಾಂಗ್ರೆಸ್ ಪಕ್ಷದವರ ಡಿಎನ್‌ಎ ಆಗಿದೆ. ಗುಲಾಮಿ ಅವರ ರಕ್ತಗತವಾಗಿ ಬಂದಿದೆ ಎಂದು ತೇಜಸ್ವಿಸೂರ್ಯ ಅವರು ಕಾಂಗ್ರೆಸ್ ಸಂಸದ ರಾಹುಲ್‌ಗಾಂಧಿ ಅವರಿಗೆ ತಿರುಗೇಟು ನೀಡಿದರು. ಬಿಜೆಪಿಯವರಲ್ಲಿ ಗುಲಾಮಿತನ ಇದೆ ಎನ್ನುವ ಅವರು ಮೊದಲು ತಮ್ಮ ಪಕ್ಷದ ಬಗ್ಗೆ ತಿಳಿದುಕೊಳ್ಳಲಿ ಎಂದು ಚಾಟಿ ಬಿಸಿದರು. ಸ್ವಾತಂತ್ರÈ ಪೂರ್ವದಲ್ಲಿ ಮತ್ತು ಸ್ವಾತಂತ್ರÈ ನಂತರವೂ ಕಾಂಗ್ರೆಸ್‌ನವರು ಏನು ಮಾಡಿಕೊಂಡು ಬಂದಿದ್ದಾರೆ ಎಂಬುದು ಒಮ್ಮೆ ನೋಡಲಿ ಎಂದು ಕಿಚಾಯಿಸಿದರು. ಯುವ ನೇತಾರ ಚಂದು ಪಾಟೀಲ್ , ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರವೀಣ ತೆಗನೂರ ಇತರರಿದ್ದರು.