ವೃದ್ಧರ ಮನವಿಗೆ ಸಂಸದ ಕೋಟ ಸ್ಪಂದನೆ

Kota Srinivas Poojari
Published on

ಕುಂದಾಪುರ: ಉತ್ತರ ಭಾರತ ಪ್ರವಾಸ ಮುಗಿಸಿ ಮುಂಬೈಗೆ ಬಂದು ಮತ್ಸೃಗಂಧ ರೈಲು ಏರಬೇಕಿದ್ದ ಉಡುಪಿ ಜಿಲ್ಲೆಯ ಸುಮಾರು 80 ಜನ ಹಿರಿಯ ನಾಗರಿಕರ ಗುಂಪಿದ್ದ ರಾಂಚಿ ಮುಂಬೈ ಎಕ್ಸ್ ಪ್ರೆಸ್ ರೈಲು 10 ಘಂಟೆ ವಿಳಂಬದಿಂದ ಪ್ರಯಾಣ ಮೊಟಕುಗೊಂಡಿದ್ದು, ವಿಷಯ ತಿಳಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೂಡಲೇ ಕಾರ್ಯಪ್ರವೃತ್ತರಾಗುವ ಮೂಲಕ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಹಿರಿಯ ನಾಗರೀಕರ ಗುಂಪು ಮುಂಬೈ ತಲುಪುವ ಮೊದಲೇ ಮತ್ಸೃಗಂಧ ರೈಲು ಹೊರಟಾಗಿತು.್ತ ಹೀಗಾಗಿ, ಈ ಗುಂಪಿನವರು ಉಡುಪಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ಸಂದೇಶ ಕಳಿಸಿದ್ದರು. ತಕ್ಷಣ ಕಾರ್ಯೋನ್ಮುಖರಾದ ಸಂಸದರು ದೆಹಲಿಯ ರೈಲ್ವೆ ಸಚಿವಾಲಯದ ಜತೆ ಮಾತುಕತೆ ನಡೆಸಿ ಮಂಗಳೂರು ಕಡೆ ಬರಬೇಕಾದ ಛತ್ರಪತಿ ಶಿವಾಜಿ ಟರ್ಮಿನಸ್ ರೈಲಿಗೆ ವಿಶೇಷ ಬೋಗಿಯ ವ್ಯವಸ್ಥೆ ಕಲ್ಪಿಸಿದ್ದಾರೆ.

ರೈಲು ಮಂಡಳಿಯಿಂದ ಸೆಂಟ್ರಲ್ ರೈಲ್ವೆಗೆ ಈ ಬಗ್ಗೆ ಆದೇಶ ಬಂದ ಕೂಡಲೇ ಹೆಚ್ಚುವರಿ ಬೋಗಿಯ ಅಳವಡಿಕೆ ಮಾಡಲಾಗಿದ್ದು, ಸಮಸ್ಯೆಗೆ ಸಿಲುಕಿದ್ದ ಗುಂಪು ಊರಿಗೆ ಪ್ರಯಾಣ ಬೆಳೆಸಿದ್ದಾರೆ. ಸಂಸದ ಶ್ರೀನಿವಾಸ್ ಪೂಜಾರಿ ಅವರ ಕಾರ್ಯವೈಖರಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net