ಕಾರ್ಕಳದಲ್ಲಿ ಕಸಾಪ ಪದಾಧಿಕಾರಿಗಳ ಸಭೆ

kasapa
ಕಾರ್ಕಳ ತಾಲೂಕು 20ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಪೂರ್ವಭಾವಿ ಸಭೆ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು. ಗಿರೀಶ್ ರಾವ್, ದೇವುದಾಸ್ ನಾಯಕ್, ಶಿವಸುಬ್ರಹ್ಮಣ್ಯ ಭಟ್ ಮೊದಲಾದವರಿದ್ದರು.
Published on

ವಿಜಯವಾಣಿ ಸುದ್ದಿಜಾಲ ಕಾರ್ಕಳ

ಕನ್ನಡ ಸಾಹಿತ್ಯ ಪರಿಷತ್ ಕಾರ್ಕಳ ತಾಲೂಕು ಘಟಕ ಪದಾಧಿಕಾರಿಗಳ ವಿಶೇಷ ಸಭೆ ಕಾರ್ಕಳದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.
ಡಿ.6ರಂದು ಶಿರ್ಲಾಲಿನಲ್ಲಿ ಕೊಳಕೆ ಇರ್ವತ್ತೂರು ಗುಣಪಾಲ ಕಡಂಬ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಕಳ ತಾಲೂಕು 20ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮಗಳ ರೂಪುರೇಷೆ ಬಗ್ಗೆ ಚರ್ಚಿಸಲಾಯಿತು.

ಸಮ್ಮೇಳನದಲ್ಲಿ ಮುಖ್ಯವಾಗಿ ಅಜೆಕಾರು ಪದ್ಮ ಗೋಪಾಲ್ ಎಜುಕೇಶನ್ ಟ್ರಸ್ಟ್‌ನ ಜ್ಞಾನ ಸುಧಾ ಪ್ರಾಯೋಜಕತ್ವದಲ್ಲಿ ನೀಡುವ ಜಿಲ್ಲಾ ಮಟ್ಟದ ವಿದ್ಯಾರ್ಥಿ ಕವಿ/ಕವಿಯತ್ರಿ ಪ್ರಶಸ್ತಿ, ಕನ್ನಡನಾಡಿನ ಸೇವೆ ಮಾಡುತ್ತಿರುವ ಜಿಲ್ಲೆಯ ಉತ್ತಮ ಸಂಘ ಸಂಸ್ಥೆಗಳನ್ನು ಗುರುತಿಸಿ ಮಾಜಿ ಶಾಸಕ ದಿ.ಗೋಪಾಲ ಭಂಡಾರಿ ಹೆಸರಿನಲ್ಲಿ ನೀಡುವ ಪ್ರಶಸ್ತಿ ಹಾಗೂ ರವೀಂದ್ರ ಶೆಟ್ಟಿ ಬಜಗೋಳಿ ಪ್ರಾಯೋಜಕತ್ವದಲ್ಲಿ ನೀಡುವ ತಾಲೂಕಿನ ಅತ್ಯುತ್ತಮ ಕನ್ನಡ ಮಾಧ್ಯಮ ಶಾಲೆ ಗುರುತಿಸಿ ಕರುನಾಡ ಸಿರಿ ಪ್ರಶಸ್ತಿಗೆ ಆಯ್ಕೆ ಮಾಡುವ ಬಗ್ಗೆ ಚರ್ಚಿಸಲಾಯಿತು.

ಕಸಾಪ ಕಾರ್ಕಳ ತಾಲೂಕು ಘಟಕಾಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಂಘಟನಾ ಕಾರ್ಯದರ್ಶಿ ಗಿರೀಶ್ ರಾವ್, ಸದಸ್ಯರಾದ ದೇವುದಾಸ್ ನಾಯಕ್, ಶಿವಸುಬ್ರಹ್ಮಣ್ಯ ಭಟ್ ನಾಗೇಶ್ ನಲ್ಲೂರು, ಆಶೀಷ್ ಶೆಟ್ಟಿ, ವಸಂತ ಎ, ರಮೇಶ್ ಪ್ರಭು, ತಿಪ್ಪೆಸ್ವಾಮಿ, ಶೈಲಜಾ ಹೆಗ್ಡೆ, ಮಾಲತಿ ಜಿ ಪೈ, ಡಾ ಸುಮತಿ ಸುಲೋಚನಾ ಉಪಸ್ಥಿತರಿದ್ದರು. ಗಣೇಶ್ ಜಾಲ್ಸೂರು ಸ್ವಾಗತಿಸಿದರು. ದೇವದಾಸ ಕೆರೆಮನೆ ವಂದಿಸಿದರು.

ಯುವ ಬರಹಗಾರರ ಸಮಾವೇಶ

ಯುವ ಬರಹಗಾರರನ್ನು ಉತ್ತೇಜಿಸುವ ನಿಟ್ಟನಲ್ಲಿ ಕಾರ್ಕಳ ಘಟಕದ ಕಸಾಪದಿಂದ ಅಕ್ಟೋಬರ್‌ನಲ್ಲಿ ತಾಲೂಕು ಹಂತದ ಯುವ ಬರೆಹಗಾರರ ಸಮಾವೇಶ ಆಯೋಜಿಸುವ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net