ಎಚ್‌ಎಎಲ್ ಸ್ಥಾಪನೆಗೆ ನನ್ನ ಕೊಡುಗೆ ಇದೆ ಎಂದ ಜಿಎಸ್ಬಿ

GSB_PC_02
Published on

ತುಮಕೂರು: ಜಿಲ್ಲೆಗೆ ಎಚ್‌ಎಎಲ್, ವಸಂತನರಸಾಪುರ ಕೈಗಾರಿಕಾ ಕಾರಿಡಾರ್, ಪವರ್‌ಗ್ರಿಡ್ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದೇನೆ ಎಂದು ಸಂಸದ ಜಿ.ಎಸ್.ಬಸವರಾಜು ಹೇಳಿದರು.

ತಮ್ಮ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀರಾವರಿ ವಿಚಾರದಲ್ಲಿ ನಿರಂತರ ಹೋರಾಟ ಮಾಡುತ್ತಿದ್ದೇನೆ. ಸಂಸದನಾಗಿ ಜಿಲ್ಲೆ, ರಾಜ್ಯದ ಹಿತಾಸಕ್ತಿ ವಿಷಯವಾಗಿ 500ಕ್ಕೂ ಅಧಿಕ ಪ್ರಶ್ನೆಗಳನ್ನು ಸಂಸತ್‌ನಲ್ಲಿ ಎತ್ತಿದ್ದು, ಎಲ್ಲದಕ್ಕೂ ದಾಖಲೆಯಿದೆ. 5 ಬಾರಿ ಸಂಸದರಾಗಿ ಪಾರ್ಲಿಮೆಂಟ್‌ನಲ್ಲಿ ತುಟಿ ಬಿಚ್ಚಿಲ್ಲ ಎಂದು ಟೀಕಿಸುವವರಿಗೆ ಸಂಸದನಾದ ಆರಂಭದಿಂದ ಇಲ್ಲಿಯವರೆಗೂ ಶ್ರಮಿಸಿದ ಪ್ರತಿಯೊಂದು ಯೋಜನೆಯ ಬಗ್ಗೆ ದಾಖಲೆ ಸಹಿತ ಜನರ ಮುಂದಿಡುವುದಾಗಿ ಬಸವರಾಜು ಸವಾಲೆಸದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net