

ಬೆಂಗಳೂರು: ಬೈಕ್ ನಂಬರ್ ಪ್ಲೇಟ್ನಲ್ಲಿ ಪೊಲೀಸ್ ಎಂದು ಬರೆದುಕೊಂಡು ನಗರದಲ್ಲಿ ಸುತ್ತಾಡುತ್ತಿದ್ದ ಯುವಕನೊಬ್ಬ ಕೆಆರ್ಪುರ ಸಂಚಾರ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.
ಆಂಧ್ರಪ್ರದೇಶ ಚಿತ್ತೂರು ಮೂಲದ ಕುಮಾರ್ (23) ಬಂಧಿತ ಆರೋಪಿ. ಕೆಲ ದಿನಗಳ ಹಿಂದೆ ಕುಮಾರ್ ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದ. ಬೈಕ್ನ ನಂಬರ್ ಪ್ಲೇಟ್ನಲ್ಲಿ ಪೊಲೀಸ್ ಎಂದು ಬರೆಸಿಕೊಂಡು ತಿರುಗಾಡುತ್ತಿದ್ದ.
ಭಾನುವಾರ ಬೆಳಗ್ಗೆ ಈತ ತಿರುಗಾಡುತ್ತಿರುವುದನ್ನು ಗಮನಿಸಿದ ಕೆಆರ್ಪುರ ಸಂಚಾರ ಪೊಲೀಸರು ತಡೆದು ನಿಲ್ಲಿಸಿ ದಾಖಲೆ ಕೇಳಿದಾಗ ಸತ್ಯ ಸಂಗತಿ ಬೆಳಕಿಗೆ ಬಂದಿದೆ. ಪೊಲೀಸರು 2 ಸಾವಿರ ರೂ. ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ.