

ಸಿಂಧನೂರು: ತಾಯಿ ಹಾಲು ಅಮೃತಕ್ಕೆ ಸಮವಾಗಿದ್ದು, ಮಗುವಿನ ಬೆಳೆವಣಿಗೆಯಲ್ಲಿ ಮುಖ್ಯ ಪಾತ್ರವಹಿಸುತ್ತದೆ ಎಂದು ಸ್ತ್ರೀರೋಗ ತಜ್ಞೆ ಡಾ.ಕಾವೇರಿ ಹೇಳಿದರು.
ಇದನ್ನೂ ಓದಿ:ವಿಶ್ವ ಸ್ತನ್ಯಪಾನ ಸಪ್ತಾಹ ಮಾಹಿತಿ
ನಗರದಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ, ತಾಲೂಕು ಸಾರ್ವಜನಿಕ ಆಸ್ಪತ್ರೆ ಮತ್ತು ಸನ್‌ರೈಸ್ ಸ್ಕೂಲ್ ಆಫ್ ನರ್ಸಿಂಗ್ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಗು ಹುಟ್ಟಿದ 6 ತಿಂಗಳವರೆಗೆ ತಾಯಿ ಹಾಲು ಮಾತ್ರ ನೀಡಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಬೇರೆ ಯಾವುದೇ ಆಹಾರ ಅಥವಾ ಪಾನೀಯ ನೀಡಬಾರದು. ಸ್ತನ್ಯಪಾನ ಶಿಶುಗಳಿಗೆ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. ಅಪಾಯಕಾರಿ ಸೋಂಕುಗಳಿಂದ ರಕ್ಷಿಸಲು ಸಹಕಾರಿಯಾಗಿದೆ. ತಾಯಿ ಮತ್ತು ಮಗುವಿನ ಬಾಂಧವ್ಯ ಬಲಪಡಿಸುತ್ತದೆ ಎಂದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗೀತಾ ಹಿರೇಮಠ ಮಾತನಾಡಿದರು.
ಸನ್‌ರೈಸ್ ಸ್ಕೂಲ್ ಆಫ್ ನರ್ಸಿಂಗ್ ಕಾಲೇಜಿನ ಪ್ರಾಚಾರ್ಯ ಲಾಜರ್ ಸಿರಿಲ್, ಕಾರ್ಯದರ್ಶಿ ಇರ್ಷಾದ್, ಉಪನ್ಯಾಸಕ ವೀರೇಶ, ಮಕ್ಕಳ ತಜ್ಞೆ ಡಾ.ಶ್ರುತಿ, ಹಿರಿಯ ಆರೋಗ್ಯ ಸಹಾಯಕ ಸಂಗನಗೌಡ, ಹಿರಿಯ ಶುಶ್ರೂಷಕ ಅಧಿಕಾರಿ ಪುಷ್ಪಾರಾಣಿ, ಗುರು ಶಾಂತಮ್ಮ ಹೆರಿಗೆ ವಿಭಾಗದ ಶುಶ್ರೂಷಕಿ ನಿರ್ಮಲಾ, ಇದ್ದರು.