ಕೋಟ: ಜಿಪಂ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಮುದಾಯ ಆರೋಗ್ಯ ಕೇಂದ್ರ, ಕೋಟ ಸಹಕಾರಿ ವ್ಯವಸಾಯಕ ಸಂಘ, ಇನ್ನರ್‌ವ್ಹೀಲ್ ಕ್ಲಬ್ ಕೋಟ- ಸಾಲಿಗ್ರಾಮ, ರೋಟರಿ ಸಮುದಾಯ ದಳ ಮೂಡುಗಿಳಿಯಾರು, ರೋಟರಿ ಕ್ಲಬ್ ಕೋಟ-ಸಾಲಿಗ್ರಾಮ ಸಹಯೋಗದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಮಾಹಿತಿ ಕಾರ್ಯಾಗಾರ ಮೂಡುಗಿಳಿಯಾರಿನಲ್ಲಿ ನಡೆಯಿತು.
ಸಮುದಾಯ ಆರೋಗ್ಯ ಕೇಂದ್ರ ಕೋಟ ವೈದ್ಯಾಧಿಕಾರಿ ಡಾ.ಮಾಧವ ಪೈ ವಿಶ್ವ ಸ್ತನ್ಯಪಾನ ಸಪ್ತಾಹ ಕುರಿತು ಮಾಹಿತಿ ನೀಡಿದರು. ಇನ್ನರ್‌ವ್ಹೀಲ್ ಕ್ಲಬ್ ಕೋಟ- ಸಾಲಿಗ್ರಾಮ ಅಧ್ಯಕ್ಷ ಪುಷ್ಪಲತಾ ನಾರಿ ಮತ್ತು ಕಾರ್ಯದರ್ಶಿ ಪೂಜಾ, ಕೋಟ ರೋಟರಿ ಸಮುದಾಯ ದಳ ಮೂಡುಗಿಳಿಯಾರು ಅಧ್ಯಕ್ಷ ಗೋಪಾಲ ಜಿ. ಮತ್ತು ಕಾರ್ಯದರ್ಶಿ ಲಲಿತಾ, ಶರಣಯ್ಯ ಹಿರೇಮಠ್ ಉಪಸ್ಥಿತರಿದ್ದರು. ಕೋಟ ಸಹಕಾರಿ ವ್ಯವಸಾಯಕ ಸಂಘ ಅಧ್ಯಕ್ಷ ಡಾ.ಕೃಷ್ಣ ಕಾಂಚನ್ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕ್ಲಬ್ ಕೋಟ- ಸಾಲಿಗ್ರಾಮ ಮತ್ತು ಇನ್ನರ್‌ವ್ಹೀಲ್ ಕ್ಲಬ್ ಕೋಟ-ಸಾಲಿಗ್ರಾಮ ಸದಸ್ಯರು, ರೋಟರಿ ಸಮುದಾಯ ದಳ ಮೂಡುಗಿಳಿಯಾರು ಸದಸ್ಯರು, ಕೋಟ ಸಹಕಾರಿ ವ್ಯವಸಾಯಕ ಸಂಘದ ನಿರ್ದೇಶಕರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು. ರೋಟರಿ ಕ್ಲಬ್ ಕೋಟ- ಸಾಲಿಗ್ರಾಮ ಅಧ್ಯಕ್ಷ ಜಿ.ತಿಮ್ಮ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಕೋಟ ಸಹಕಾರಿ ವ್ಯವಸಾಯಕ ಸಂಘ ಕೋಟ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶರತ್ ಕುಮಾರ್ ಶೆಟ್ಟಿ ವಂದಿಸಿದರು.