

ಗುಬ್ಬಿ: ತನ್ನಿಬ್ಬರು ಮಕ್ಕಳನ್ನು ನೇಣಿಗೆ ಹಾಕಿ ತಾಯಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾಹಕ ಘಟನೆ ನಡೆದಿದೆ.
ತಾಲೂಕಿನ ನಿಟ್ಟೂರು ಹೋಬಳಿ ಅದಲಗೆರೆ ಗ್ರಾಮದಲ್ಲಿ ವಿಜಯಲಕ್ಷ್ಮೀ (45) ಹಾಗೂ ಮಕ್ಕಳಾದ ಚೂಡಾಮಣಿ (23), ನರಸಿಂಹರಾಜು (14) ಆತ್ಮಹತ್ಯೆ ಮಾಡಿಕೊಂಡವರು. ಚೂಡಾಮಣಿ ಮತ್ತು ನರಸಿಂಹರಾಜು ಬುದ್ಧಿಮಾಂಧ್ಯರು ಎನ್ನಲಾಗಿದೆ. ಮನೆಯಲ್ಲಿ ಆರ್ಥಿಕ ಸಂಕಷ್ಟವಿತ್ತು. ಮಾತ್ರೆ ಸೇರಿದಂತೆ ಸಾಕಷ್ಟು ಖರ್ಚು ಬರುತ್ತಿದ್ದರಿಂದ ಮನನೊಂದು ವಿಜಯಲಕ್ಷ್ಮೀ ಮನೆಯ ತೊಲೆಗೆ ಮಕ್ಕಳಿಬ್ಬರನ್ನು ನೇಣುಹಾಕಿ, ತಾನೂ ನೇಣಿಗೆ ಶರಣಾಗಿದ್ದಾರೆಂದು ತಿಳಿದು ಬಂದಿದೆ.
ಪತಿ ಮಹಾದೇವಯ್ಯ ಮನೆಯಲ್ಲಿ ಇಲ್ಲದ ವೇಳೆ ವಿಜಯಲಕ್ಷ್ಮೀ ಮಕ್ಕಳ ಜತೆ ಆತ್ಮಹತ್ಯೆಗೆ ಮಾಡಿಕೊಂಡಿದ್ದು ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.