ಮಾಗಡಿ: ತಾಲೂಕಿನ ಜುಟ್ನಹಳ್ಳಿ ಗೇಟ್ನ ಹನುಮಂತಯ್ಯನ ಪಾಳ್ಯದ ಬಸ್ ನಿಲ್ದಾಣದ ಬಳಿ ಬುಧವಾರ ದ್ವಿಚಕ್ರವಾಹನಕ್ಕೆ ಖಾಸಗಿ ಬಸ್ ಡಿಕ್ಕಿಯಾಗಿ ಅತ್ತೆ, ಅಳಿಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ತಾಲೂಕಿನ ಅರಳಕುಪ್ಪೆ ಶಿವಣ್ಣಗೌಡ (45), ಗಂಗಮ್ಮ (58) ಮೃತರು. ಶಿವಣ್ಣಗೌಡ ಅವರು ಬೆಂಗಳೂರಿನಲ್ಲಿನ ಪುತ್ರನ ಮನೆಗೆ ಅತ್ತೆ ಗಂಗಮ್ಮನನ್ನು ಕರೆದುಕೊಂಡು ಬೈಕ್ನಲ್ಲಿ ತೆರಳುವಾಗ ಹನುಮಂತಯ್ಯನ ಪಾಳ್ಯದ ಬಸ್ ನಿಲ್ದಾಣದ ಬಳಿ ಮಾಗಡಿ&ಹುಲಿದುರ್ಗದ ಕಡೆ ತೆರಳುತ್ತಿದ್ದ ಖಾಸಗಿ ಬಸ್ನ ಟಯರ್ ಸ್ಫೋಟಗೊಂಡು, ಚಾಲಕನ ನಿಯಂತ್ರಣ ತಪ್ಪಿ ಬೈಕ್ಗೆ ಡಿಕ್ಕಿ ಹೊಡೆದಿದೆ.ಡಿಕ್ಕಿ ರಭಸಕ್ಕೆ ಇಬ್ಬರೂ ಸ್ಥಳದಲ್ಲೇ ಸಾವನ್ನಪಿದ್ದಾರೆ ಎನ್ನಲಾಗಿದೆ. ಇನ್ನು ಖಾಸಗಿ ಬಸ್ನಲ್ಲಿದ್ದ ಕೆಲವರಿಗೆ ಸಣ್ಣ&ಪುಟ್ಟ ಗಾಯಗಳಾಗಿದ್ದು, ಮಾಗಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅಪಘಾತದ ಬಳಿಕ ಬಸ್ ಚಾಲಕ, ಕಂಡಕ್ಟರ್ ಪರಾರಿಯಾಗಿದ್ದಾರೆ ಎನ್ನಲಾಗಿದ್ದು, ಮಾಗಡಿ ಇನ್ಸ್ಪೆಕ್ಟರ್ ಜಿ.ವೈ.ಗಿರಿರಾಜು, ಸಬ್ಇನ್ಸ್ಪೆಕ್ಟರ್ ಮನೋಜ್ ಸ್ಥಳ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.