ಒಂದಲ್ಲ, ಎರಡಲ್ಲ, ಮೂರು ಮಕ್ಕಳಿಗೆ ಜನ್ಮವಿತ್ತ ಮಹಿಳೆ; ಈ ದಂಪತಿಗೆ ತ್ರಿವಳಿ ಹೆಣ್ಣುಮಕ್ಕಳು..

Child
Published on

ವಿಜಯನಗರ: ಹೆರಿಗೆ ಸಲುವಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರು ಮೂರು ಮಕ್ಕಳಿಗೆ ಜನ್ಮ ನೀಡುವ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ. ವಿಜಯನಗರ ಜಿಲ್ಲೆ ಹೊಸಪೇಟೆಯ ಅಂಜುಮಾನ್ ಆಸ್ಪತ್ರೆಯಲ್ಲಿ ಈ ಅಪರೂಪದ ಹೆರಿಗೆಯಾಗಿದೆ.

ಹೊಸಪೇಟೆ ಮೂಲದ ಉಮಾ ಮತ್ತು ಪ್ರಕಾಶ್ ದಂಪತಿ ಈ ಮೂಲಕ ತ್ರಿವಳಿ ಹೆಣ್ಣುಮಕ್ಕಳನ್ನು ಹೊಂದಿದಂತಾಗಿದೆ. ತಾಯಿ ಹಾಗೂ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ.

ಆದರೆ ಮಕ್ಕಳ ತೂಕ ಕಡಿಮೆ ಇರುವ ಕಾರಣ ಅವನರನ್ನು ಬಳ್ಳಾರಿಯ ವಿಮ್ಸ್​ ಆಸ್ಪತ್ರೆ ಕಳುಹಿಸಿಕೊಡಲಾಗಿದೆ. ತಾಯಿ ಅಂಜುಮಾನ್ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂಜುಮಾನ್ ಆಸ್ಪತ್ರೆ ವೈದ್ಯರಾದ ಡಾ. ಅತಿಕಾಹಿನ, ಡಾ. ಸುರೇಖಾ, ಡಾ. ಬಾಲಚಂದ್ರನ್ ಯಶಸ್ವಿಯಾಗಿ ಈ ಹೆರಿಗೆ ಮಾಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net