ಕರಾಚಿಕಟ್ಟೆ ಗ್ರಾಮದಿಂದ ತಾಯಿ, ಮಗಳು ನಾಪತ್ತೆ

ಕರಾಚಿಕಟ್ಟೆ ಗ್ರಾಮದಿಂದ ತಾಯಿ, ಮಗಳು ನಾಪತ್ತೆ
Published on

ಕೊಳ್ಳೇಗಾಲ: ತಾಲೂಕಿನ ಶಾಂತಿನಗರ ಜಾಗೇರಿಯ ಕರಾಚಿಕಟ್ಟೆ ಗ್ರಾಮದಿಂದ ತಾಯಿ ಮತ್ತು ಮಗಳು ನಾಪತ್ತೆಯಾಗಿರುವ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರಾಚಿಕಟ್ಟೆ ಗ್ರಾಮದ ನಿವಾಸಿ ಆರೋಗ್ಯಸ್ವಾಮಿ ಎಂಬುವರ ಪತ್ನಿ ಜಸಿಂತಾ ಸಗಾಯಮೇರಿ(37) ಹಾಗೂ ಈಕೆಯ ಪುತ್ರಿ ಮರಿಯಮ್ಮ (12) ನಾಪತ್ತೆಯಾಗಿದ್ದಾರೆ. ಆರೋಗ್ಯಸ್ವಾಮಿ ಹಾಗೂ ಜಸಿಂತಾ ಸಗಾಯ ಮೇರಿಗೆ ಮೂರು ಮಕ್ಕಳಿದ್ದಾರೆ.

ಜೂ.4 ರಂದು ಆರೋಗ್ಯಸ್ವಾಮಿ ತಮ್ಮ ಇಬ್ಬರು ಮಕ್ಕಳನ್ನು ನಂಜನಗೂಡಿನ ಮುರಾರ್ಜಿ ಶಾಲೆಗೆ ದಾಖಲಿಸಿ ವಾಪಸ್ ಸಂಜೆ 4 ಗಂಟೆ ಗ್ರಾಮಕ್ಕೆ ಮರಳಿದ್ದಾರೆ. ಈ ವೇಳೆ ಮನೆ ಬೀಗ ಹಾಕಿತ್ತು. ವಿಚಾರಣೆ ನಡೆಸಿದಾಗ ಜಸಿಂತಾ ಸಗಾಯಮೇರಿ ಮಗಳ ಜತೆ ಶಿಲುಬೆಪುರಕ್ಕೆ ತೆರಳಿದ್ದರು ಎಂದು ತಿಳಿದು ಬಂದಿತ್ತು. ಬಳಿಕ ಆರೋಗ್ಯಸ್ವಾಮಿ ಶಿಲುಬೆಪುರಕ್ಕೆ ಭೇಟಿ ನೀಡಿದ್ದು, ಅಲ್ಲಿ ಪತ್ನಿ ಹಾಗೂ ಮಗಳು ಇರಲಿಲ್ಲ. ಬುಧವಾರ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net