ಮರಿಯೊಂದಿಗೆ ಆಟವಾಡುತ್ತಿರುವ ತಾಯಿ ಕರಡಿ

Kailancha-Ph-01-Srs Betta Karadi News Photo- 17-7-2025
Published on

ರಾಮನಗರ: ಪ್ರಸಿದ್ದ ಪ್ರವಾಸಿ ತಾಣ ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟದ ಅಕ್ಕಪಕ್ಕದ ಬೆಟ್ಟದ ಮೇಲೆ ಕರಡಿ ತನ್ನ ಮರಿಯೊಂದಿಗೆ ಆಹಾರ ತಿನ್ನುತ್ತ ಓಡಾಟ ನಡೆಸಿ ಆಟವಾಡುತ್ತಿರುವ ದೃಶ್ಯವನ್ನು ಪ್ರವಾಸಿಗರೊಬ್ಬರು ತಮ್ಮ ಡ್ರೋಣ್ ಕ್ಯಾಮರಾ ಮೂಲಕ ಕರಡಿ ಮತ್ತು ಮರಿಯ ಚಿತ್ರಣವನ್ನು ಸೆರೆ ಹಿಡಿದಿದ್ದು ಇದು ಸಾಮಾಜಿಕ ಜಾಲತಾಣದಲ್ಲಿ ಕಳೆದ ಎರಡು ದಿನಗಳಿಂದ ವೈರಲ್ ಆಗಿದೆ.

ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟ, ಹಂದಿಗುAದಿ ಅರಣ್ಯಪ್ರದೇಶಕ್ಕೆ ಹೊಂದಿಕೊAಡಿದೆ. ಬೆಟ್ಟ ಕಲ್ಲುಗಳಿಂದ ಆವೃತ್ತವಾಗಿದ್ದರೂ ಬೆಟ್ಟಗಳ ಮೇಲೆ ಗಿಡ ಮಣ್ಣು ಇದೆ. ಜೊತೆಗೆ ಸಾಕಷ್ಟು ಅರಣ್ಯ ಪ್ರದೇಶವೂ ಇದೆ. ಪುರಾತನ ಕಾಲದಿಂದಲೂ ಬೆಟ್ಟದ ಅಕ್ಕಪಕ್ಕ ಮತ್ತು ಬೆಟ್ಟದಲ್ಲಿ ಕರಡಿಗಳು ವಾಸ ಮಾಡುತ್ತಿವೆ.

ಬೆಟ್ಟದಲ್ಲಿ ಮುಂಜಾವು ಸಂಜೆ ವೇಳೆಯಲ್ಲಿ ಕರಡಿಗಳು ಗುಹೆಯಿಂದ ಹೊರಬಂದು ಆಹಾರ ಅರಸುತ್ತಾ ಬೆಟ್ಟದ ಆಸುಪಾಸಿನಲ್ಲೇ ಓಡಾಟ ನಡೆಸುತ್ತಿರುತ್ತವೆ. ಬೆಟ್ಟಕ್ಕೆ ಬಂದ ಭಕ್ತರಿಗೆ ಬೆಟ್ಟದ ನಿವಾಸಿಗಳಿಗೆ ಅಕ್ಕಪಕ್ಕದ ಗ್ರಾಮಗಳ ಜನರಿಗೆ ಕರಡಿಗಳು ಆಗಿಂದಾಗ್ಗೆ ಕಾಣಿಸಿಕೊಳ್ಳುತ್ತಿರುತ್ತವೆ. ಬೆಟ್ಟಕ್ಕೆ ಬಂದ ಭಕ್ತರೊಬ್ಬರಿಗೆ ಕೆಲವು ವರ್ಷಗಳ ಹಿಂದೆ ಕರಡಿ ಗಾಯ ಮಾಡಿದ ಉದಾಹರಣೆಯೂ ಕಣ್ಣ ಮುಂದಿದೆ. ಈ ಚಿತ್ರಣವನ್ನು ಮೊಬೈಲ್‌ನಲ್ಲಿ ಹರಿಯಬಿಟ್ಟ ಕಾರಣ ಸಾಕಷ್ಟು ವೈರಲ್ ಆಗಿದೆ. ವಾಟ್ಸಾಪ್ ಸ್ಟೇಟಸ್‌ನಲ್ಲಿ ಕರಡಿ ವಿಡಿಯೋ ತುಣುಕುಗಳು ಹರಿದಾಡುತ್ತಿವೆ.

ಎರಡು ಕಾಲಿನಲ್ಲಿ ನಿಂತ ಕರಡಿ ಮತ್ತು ಮರಿ : ಬೆಟ್ಟದ ತಂಪಾದ ಸ್ಥಳದಲ್ಲಿ ಮರಗಿಡಗಳ ಮಧ್ಯೆ ಆಹಾರ ತಿನ್ನುತ್ತಾ ತನ್ನ ಮರಿಯೊಂದಿಗೆ ಕರಡಿ ಆಟವಾಡುವ ಚಿತ್ರಣವನ್ನು ಡ್ರೋಣ್ ಕ್ಯಾಮೆರಾದಲ್ಲಿ ಸೆರೆಯಿಡಿಯಲಾಗಿದೆ. ಡ್ರೋಣ್ ಕ್ಯಾಮೆರಾ ನೋಡಿ ಮತ್ತು ಸದ್ದು ಕೇಳಿ ಅದರ ಕಡೆ ನೋಡುತ್ತಾ ಮರಿ ಮತ್ತು ಕರಡಿ ಎರಡು ಕಾಲಿನಲ್ಲಿ ನಿಂತು ನೋಡಿ ನಂತರ ಕರಡಿ ತನ್ನ ಮರಿಯನ್ನು ತನ್ನ ಬೆನ್ನ ಮೇಲೆ ಕೂರಿಸಿಕೊಂಡು ಹಸಿರು ಗಿಡ ಮರಗಳ ಮಧ್ಯೆ ಹೋಗಿ ಕಲ್ಲಿನ ಗುಹೆಯೊಳಗೆ ಸೇರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net