ತಾಯಿ ಮತ್ತು ಮೂವರು ಮಕ್ಕಳ ಸಾವಿಗೆ ಕಾರಣರಾದ ಅಪ್ಪ ಮಕ್ಕಳ ಬಂಧನ..

Arrest
Published on

ವಿಜಯಪುರ: ತಾಯಿ ಮತ್ತು ಮೂರು ಮಕ್ಕಳ ಸಾವಿಗೆ ಕಾರಣರಾದ ಇಬ್ಬರು ಸಹೋದರರು ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಮೊನ್ನೆಯಷ್ಟೇ ಈ ಪ್ರಕರಣ ನಡೆದಿದ್ದು, ಪೊಲೀಸರು ಇಂದು ಆರೋಪಿಗಳನ್ನು ಬಂಧಿಸಿದ್ದಾರೆ.

ಪಿಂಟೂ ಜಾಧವ್, ಧರ್ಮು ಜಾಧವ್, ವಿಠಲ್ ಜಾಧವ್ ಬಂಧಿತ ಆರೋಪಿಗಳು. ಜೂ. 15ರಂದು ಪ್ರವೀಣ (6), ಸುದೀಪ (4), ಮಮದಿಕಾ (2) ಎಂಬ ಮೂವರು ಮಕ್ಕಳನ್ನು ಕೃಷಿಹೊಂಡಕ್ಕೆ ಎಸೆದು ಬಳಿಕ ತಾಯಿ ಅನಿತಾ ಪಿಂಟು ಜಾಧವ್ (27) ತಾನೂ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಕುರಿತು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ವಿಜಯಪುರ ‌ಜಿಲ್ಲೆ ತಿಕೋಟಾ ತಾಲೂಕಿನ ತೊರವಿ ತಾಂಡಾ 1ರ ತೋಟದಲ್ಲಿ ಈ ಪ್ರಕರಣ ನಡೆದಿದ್ದು, ಕೌಟುಂಬಿಕ ಕಲಹ ಕಾರಣಕ್ಕಾಗಿ ಈ ಆತ್ಮಹತ್ಯೆ ನಡೆದಿದೆ ಎನ್ನಲಾಗಿತ್ತು. ಆ ಮೇರೆಗೆ ದೂರು ದಾಖಲಿಸಿಕೊಂಡ ಪೊಲೀಸರು, ಅನಿತಾ ಪತಿ ಪಿಂಟೂ ಜಾಧವ್, ಆತನ ಸಹೋದರ ವಿಠಲ್ ಜಾಧವ್ ಮತ್ತು ತಂದೆ ಧರ್ಮು ಜಾಧವ್ ಎಂಬವರನ್ನು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net