ನದಿ ನೀರಿಗೆ ಬಿದ್ದ ಮಗನನ್ನು ರಕ್ಷಿಸಲು ಹೋದ ಅಮ್ಮನೂ ನೀರುಪಾಲು!

Untitled-1
Published on

ಕುಂದಾಪುರ: ನದಿ ನೀರಿಗೆ ಬಿದ್ದ ಮಗನನ್ನು ರಕ್ಷಿಸಲು ಹೋದ ತಾಯಿಯೂ ಕೊಚ್ಚಿಕೊಂಡು ಹೋಗಿ ನೀರುಪಾಲಾದ ದುರಂತ ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ನಾವುಂದದಲ್ಲಿ ನಡೆದಿದೆ. ರೊಸಾರಿಯಾ(35) ಹಾಗೂ ಶಾನ್‌ (11) ಸಾವಿಗೀಡಾದ ತಾಯಿ ಹಾಗೂ ಮಗ.

ಚುಂಗಿಗುಡ್ಡೆ ನದಿ ಪಕ್ಕದಲ್ಲಿ ಶನಿವಾರ ನಡೆದುಕೊಂಡು ಹೋಗುತ್ತಿದ್ದಾಗ ಬಾಲಕ ನೀರಿಗೆ ಬಿದ್ದುಬಿಟ್ಟಿದ್ದಾನೆ. ಮಗನನ್ನು ರಕ್ಷಿಸಲು ತಾಯಿ ರೊಸಾರಿಯಾ ತಕ್ಷಣವೇ ನದಿಗೆ ಧುಮುಕಿದ್ದಾರೆ. ಆದರೆ ನೀರಿನ ಸೆಳವಿಗೆ ಸಿಕ್ಕ ಇಬ್ಬರೂ ಕೊಚ್ಚಿಕೊಂಡು ಹೋಗಿದ್ದಾರೆ.

ಪ್ರಕರಣ ನಡೆದ ಸ್ಥಳದಲ್ಲೇ ಪುತ್ರ ಶಾನ್ ಮೃತದೇಹ ಸಿಕ್ಕಿದ್ದರೂ, ತಾಯಿಯ ಶವಕ್ಕಾಗಿ ದೋಣಿ ಬಳಸಿ ಜಾಲಾಡಿದ್ದು, ಮರವಂತೆ ಬಳಿ ಮೃತದೇಹ ಪತ್ತೆಯಾಗಿದೆ. ಮೃತಪಟ್ಟವರು ಪತ್ರಕರ್ತ ನಾವುಂದದ ನೋಯೆಲ್ ಚುಂಗಿಗುಡ್ಡೆ ಅವರ ಪತ್ನಿ ಹಾಗೂ ಪುತ್ರ. ಶವಗಳನ್ನು ನಾಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನೆ ಮಾಡಲಾಗಿದೆ. ಗಂಗೊಳ್ಳಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net