ಮಗಳ ಮನೆಯಿಂದ ವಾಪಸ್ ಹೊರಟಿದ್ದ ತಾಯಿ-ಮಗ ಇಬ್ಬರೂ ಮಾರ್ಗಮಧ್ಯೆ ಸಾವು!

Accident
Published on

ಹಾವೇರಿ: ಮಗಳ ಮನೆಗೆಂದು ಮಗನೊಂದಿಗೆ ಬಂದಿದ್ದ ತಾಯಿ, ವಾಪಸ್ ಹೋಗುವಾಗ ಮಗನ ಸಹಿತ ಸಾವಿಗೀಡಾದ ದುರಂತವೊಂದು ನಡೆದಿದೆ. ಮಾರ್ಗ ಮಧ್ಯೆ ಸಂಭವಿಸಿದ ಭೀಕರ ಅಪಘಾತ ಈ ತಾಯಿ-ಮಗನನ್ನು ಬಲಿ ಪಡೆದಿದೆ.

ಹಾವೇರಿ ಜಿಲ್ಲೆ ಹರವಿ ಗ್ರಾಮದ ಕಮಲವ್ವ ದೇವಗೇರಿ (65) ಮತ್ತು ರುದ್ರಪ್ಪ ದೇವಗೇರಿ (35) ಸಾವಿಗೀಡಾದ ತಾಯಿ-ಮಗ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ವರ್ದಿ ಕ್ರಾಸ್ ಬಳಿ ಬೊಲೆರೊ ವಾಹನ ಮತ್ತು ಬೈಕ್ ಮಧ್ಯೆ ಸಂಭವಿಸಿದ ಅಪಘಾತದಿಂದಾಗಿ ಇವರಿಬ್ಬರು ಸಾವಿಗೀಡಾಗಿದ್ದಾರೆ.

ಕಮಲವ್ವ ಅವರು ಸಂಗೂರು ಗ್ರಾಮದಲ್ಲಿರುವ ಮಗಳ ಮನೆಗೆ ಮಗನೊಂದಿಗೆ ಬಂದಿದ್ದರು. ಇಲ್ಲಿಂದ ಇವರಿಬ್ಬರು ಬೈಕ್​ನಲ್ಲಿ ಊರಿಗೆ ವಾಪಸ್ ಹೋಗುವಾಗ ಈ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಆಡೂರು ಠಾಣೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net