ವರ್ಕಾಡಿಯಲ್ಲಿ ಮೊಸರು ಕುಡಿಕೆ ಉತ್ಸವ

New Project (10)
Published on

ಬದಿಯಡ್ಕ: ಸಂತೋಷ್ ಫ್ರೆಂಡ್ಸ್ ಕ್ಲಬ್, ಸಂತೋಷ್ ಫ್ರೆಂಡ್ಸ್ ಕ್ಲಬ್ ಲೈಬ್ರರಿ, ಪ್ರೀತಿ ಮಹಿಳಾ ಸಮಾಜ ಪಾವಳ ವರ್ಕಾಡಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ 33ನೇ ವರ್ಷದ ಮೊಸರು ಕುಡಿಕೆ ಮಹೋತ್ಸವದ ಸಭಾ ಕಾರ್ಯಕ್ರಮವನ್ನು ಚಲನಚಿತ್ರ ನಟ ಅರವಿಂದ್ ಬೋಳಾರ್ ಉದ್ಘಾಟಿಸಿದರು.

ಲೈಬ್ರರಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಪಾವಳಗುತ್ತು ಅಧ್ಯಕ್ಷತೆ ವಹಿಸಿದ್ದರು. ಜಾನಪದ ಸಂಶೋಧನಾ ವಿದ್ಯಾರ್ಥಿ ವಿಜೇತ್ ಎಂ.ಶೆಟ್ಟಿ ಮಂಜನಾಡಿ ತುಲುವೆರೆ ಅಟ್ಟೆಮಿ ಬಗ್ಗೆ ಉಪನ್ಯಾಸ ನೀಡಿದರು. ಅಕ್ಷರ ಸಂತ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರನ್ನು ಸನ್ಮಾನಿಸಲಾಯಿತು.

ಪ್ರಮುಖರಾದ ರಾಧಾಕೃಷ್ಣ ರೈ ಉಮಿಯ, ವಿ.ಕೆ.ಉಮೇಶ್ ಕುಡುಪು, ಭಾರತಿ ಸುಳ್ಯಮೆ, ಅಬೂಬಕ್ಕರ್ ಸಿದ್ದೀಕ್ ಪಾಡಿ, ಕಮಲಾಕ್ಷಿ, ಪ್ರಭಾವತಿ ಪಾವಳಗುತ್ತು ಉಪಸ್ಥಿತರಿದ್ದರು. ಸಂತೋಷ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಕಿಶೋರ್ ಕುಮಾರ್ ಪಾವಳ ಸ್ವಾಗತಿಸಿದರು. ವಿಜಯಕುಮಾರ್ ಪಾವಳ ವಂದಿಸಿದರು. ಚೇತನ್ ವರ್ಕಾಡಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net