ಬಡಾಜೆ ಪ್ರಾಥಮಿಕ ಶಾಲಾ ಕಟ್ಟಡ ಉದ್ಘಾಟನೆ

New Project (8)
Published on

ಮಂಜೇಶ್ವರ: ಗ್ರಾಮ ಪಂಚಾಯಿತಿ ವತಿಯಿಂದ ಬಡಾಜೆ ಶಾಲೆಗೆ ನಿರ್ಮಿಸಲಾದ ಶಾಲಾ ಕಟ್ಟಡ ಮತ್ತು ಇತರ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಸೋಮವಾರ ನಡೆಯಿತು.

ಗ್ರಾ.ಪಂ. ಅಧ್ಯಕ್ಷೆ ಜೀನ್ ಲವೀನೊ ಮೊಂತೇರೋ ಕಾರ್ಯಕ್ರಮ ಉದ್ಘಾಟಿಸಿದರು. ತರಗತಿ ಕೊಠಡಿಯನ್ನು ಗ್ರಾ.ಪಂ. ಉಪಾಧ್ಯಕ್ಷ ಮೊಹಮ್ಮದ್ ಸಿದ್ಧಿಕ್ ಬಿ. ಉದ್ಘಾಟಿಸಿದರು. ಪಿಟಿಎ ಸಂದ ಅಧ್ಯಕ್ಷ ಯಾಕೂಬ್ ಕೋಡಿ ಅಧ್ಯಕ್ಷತೆ ವಹಿಸಿದ್ದರು.

ಗ್ರಾ.ಪಂ. ಅಧ್ಯಕ್ಷೆ ಜೀನ್ ಲವಿನೋ ಮೊಂತೆರೋ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಯಾದವ್ ಬಡಾಜೆ ಅವರನ್ನು ಗೌರವಿಸಲಾಯಿತು. ಸ್ಥಾಯಿ ಸಮಿತಿ ಅಧ್ಯಕ್ಷ ಯಾದವ್ ಬಡಾಜೆ, ಪಿ.ಇ.ಸಿ. ಕಾರ್ಯದರ್ಶಿ ಶಂಕರ ನಾರಾಯಣ ಭಟ್, ರರಝಾಕ್ ಕಿಟ್ಟಗುಂಡಿ, ಮುಸ್ತಫಾ, ಗಣೇಶ್ ಶಿವಪುರ, ಬಶೀರ್ ಬಡಾಜೆ, ಎಂ.ಪಿ.ಟಿ.ಎ. ಅಧ್ಯಕ್ಷೆ ಶಶಿಕಲಾ, ರಹೀಂ, ನಶೀದಾ ಮೊದಲಾದವರಿದ್ದರು. ಮುಖ್ಯಶಿಕ್ಷಕಿ ಹರಿಣಾಕ್ಷಿ ಬಿ. ಸ್ವಾಗತಿಸಿದರು. ಅಶೋಕ್ ಕೊಡ್ಲಮೊಗರು ನಿರೂಪಿಸಿದರು. ಶಿಕ್ಷಕಿ ತಲ್ಲೀನಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net