ಸುಳ್ಯದಲ್ಲಿ ಮೊಸರು ಕುಡಿಕೆ ಉತ್ಸವ

01 (1)
Published on

ಸುಳ್ಯ: ವಿಶ್ವ ಹಿಂದು ಪರಿಷತ್ ಬಜರಂಗದಳ, ಮಾತೃಶಕ್ತಿ, ದುರ್ಗಾವಾಹಿನಿ ಸುಳ್ಯ ಪ್ರಖಂಡ, ಮೊಸರು ಕುಡಿಕೆ ಉತ್ಸವ ಸಮಿತಿ ಆಶ್ರಯದಲ್ಲಿ ವಿಶ್ವ ಹಿಂದು ಪರಿಷತ್‌ನ ಸ್ಥಾಪನಾ ದಿನಾಚರಣೆ ಅಂಗವಾಗಿ ಸುಳ್ಯ ಮೊಸರು ಕುಡಿಕೆ ಉತ್ಸವ, ವೈಭವದ ಶೋಭಾಯಾತ್ರೆ ಸುಳ್ಯ ನಗರದಲ್ಲಿ ನಡೆಯಿತು.

ನಗರದ 17 ಕಡೆ ಸ್ಥಾಪಿಸಲಾದ ಅಟ್ಟಿ ಮಡಕೆ ಒಡೆಯುವ ಪ್ರದರ್ಶನವನ್ನು ಸಾವಿರಾರು ಮಂದಿ ವೀಕ್ಷಿಸಿದರು. 11 ತಂಡಗಳು ಭಾಗವಹಿಸಿದ್ದವು.

ಚೆನ್ನಕೇಶವ ದೇವಸ್ಥಾನದ ಆನುವಂಶಿಕ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ, ಜಿಪಂ ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ಬಾಲಚಂದ್ರ ಅಡ್ಕಾರ್ ಶೋಭಾಯಾತ್ರೆಗೆ ಚಾಲನೆ ನೀಡಿದರು.

ವಿಶ್ವ ಹಿಂದು ಪರಿಷತ್ ಸುಳ್ಯ ಪ್ರಖಂಡದ ಅಧ್ಯಕ್ಷ ಶ್ರೀಕಾಂತ್ ಗೋಳ್ವಾಲ್ಕರ್, ಬಜರಂಗದಳ ಸಂಯೋಜಕ ಹರಿಪ್ರಸಾದ್ ಎಲಿಮಲೆ, ಮೊಸರು ಕುಡಿಕೆ ಉತ್ಸವ ಸಮಿತಿ ಗೌರವಾಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ, ಪ್ರಧಾನ ಕಾರ್ಯದರ್ಶಿ ಭಾನುಪ್ರಕಾಶ್ ಪೆರುಮುಂಡ, ಕಾರ್ಯದರ್ಶಿ ಪಾರ್ವತಿ ಕುಂಚಡ್ಕ, ಕೋಶಾಧಿಕಾರಿ ನವೀನ್ ಎಲಿಮಲೆ, ಉಪಾಧ್ಯಕ್ಷರಾದ ಸೋಮಶೇಖರ ಪೈಕ, ಹರಿಪ್ರಸಾದ್ ಸುಲಾಯ, ವ್ಯವಸ್ಥಾಪಕ ಪ್ರಮುಖರಾದ ವರ್ಷಿತ್ ಚೊಕ್ಕಾಡಿ, ಪ್ರಕಾಶ್ ಮೇನಾಲ, ಉಪೇಂದ್ರ ನಾಯಕ್, ಮಾತೃಶಕ್ತಿ ಸಂಯೋಜಕಿ ರೀನಾ ಚಂದ್ರಶೇಖರ, ದುರ್ಗಾವಾಹಿನಿ ಸಂಯೋಜಕಿ ವಿಶಾಲ ಸೀತಾರಾಮ, ಪ್ರಮುಖರಾದ ಸುಬೋದ್ ಶೆಟ್ಟಿ ಮೇನಾಲ, ಜಯಪ್ರಕಾಶ್ ಕುಂಚಡ್ಕ, ಸುನೀಲ್ ಕೇರ್ಪಳ, ತಿಮ್ಮಪ್ಪ ನಾವೂರು, ದೇವಿಪ್ರಸಾದ್ ಅತ್ಯಾಡಿ, ಪ್ರಕಾಶ್ ಯಾದವ್, ರವಿಚಂದ್ರ ಕೊಡಿಯಾಲಬೈಲು, ಸತೀಶ್ ಟಿ.ಎನ್.ಕಲ್ಮಕ್ಕಾರು, ಪ್ರಕಾಶ್ ಯಾದವ್ ಮತ್ತಿತರರಿದ್ದರು. ಗಿರೀಶ್ ಕುಂಠಿನಿ, ತೀರ್ಥೇಶ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net