ಉಪ್ಪಿನಂಗಡಿಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ

New Project (15)
Published on

ಉಪ್ಪಿನಂಗಡಿ: ಇಲ್ಲಿನ 46ನೇ ವರ್ಷದ ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಮುಂಬರುವ ಅಗಸ್ಟ್ 16ರಂದು ನಡೆಯಲಿದ್ದು, ಆಮಂತ್ರಣ ಪತ್ರಿಕೆಯನ್ನು ಶ್ರೀ ಸಹಸ್ರಲಿಂಗೇಶ್ವರ ದೇವಳ ವಠಾರದಲ್ಲಿ ಬಿಡುಗಡೆಗೊಳಿಸಲಾಯಿತು.

ದೇವಳ ವ್ಯವಸ್ಥಾಪನಾ ಸಮಿತಿ ಸದಸ್ಯ ಸೋಮನಾಥ, ಮಾಜಿ ಸದಸ್ಯ ಕಂಗ್ವೆ ವಿಶ್ವನಾಥ ಶೆಟ್ಟಿ, ಮೊಸರು ಕುಡಿಕೆ ಸಮಿತಿ ಅಧ್ಯಕ್ಷ ಸುರೇಶ ಅತ್ರಮಜಲು, ಪ್ರಮುಖರಾದ ವಿದ್ಯಾಧರ ಜೈನ್, ಚಂದಪ್ಪ ಮೂಲ್ಯ, ಉಷಾ ಮುಳಿಯ, ಚಂದ್ರಶೇಖರ ಮಡಿವಾಳ, ಚಂದ್ರಶೇಖರ್ ಆಚಾರ್ಯ, ಲೊಕೇಶ್ ಜೈನ್, ಸಂಜೀವ ಗೌಡ, ನಿತಿನ್ ತಾರಿತ್ತಡಿ, ಜಯಂತ ಪೊರೋಳಿ, ರಾಮಚಂದ್ರ ಮಣಿಯಾಣಿ, ಉಮೇಶ ಶೆಣೈ, ಎನ್.ಪ್ರಸಾದ್ ಭಂಡಾರಿ, ಸುಧಾಕರ ಶೆಟ್ಟಿ ಕೋಟೆ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net