ಮುರಗೋಳಿ ಫ್ರೆಂಡ್ಸ್ ಮೊಸರು ಕುಡಿಕೆ : ಸಮಾಜ ಸೇವಕರಿಗೆ ಸನ್ಮಾನ

New Project (29)
Published on

ಮೂಡುಬಿದಿರೆ: ದಿ.ಬೋಜ ಪೂಜಾರಿ ಸ್ಮರಣಾರ್ಥ ಪಡುಮಾರ್ನಾಡು ಮುರಗೋಳಿ ಫ್ರೆಂಡ್ಸ್ ಆಶ್ರಯದಲ್ಲಿ ಭಾನುವಾರ ಮೊಸರು ಕುಡಿಕೆ, ಕ್ರೀಡಾಕೂಟ ನಡೆಯಿತು.

ಸತೀಶ್ ಆಚಾರ್ಯ ಮುರಗೋಳಿ ಕಾರ್ಯಕ್ರಮ ಉದ್ಘಾಟಿಸಿದರು. ಸನ್ಮಾನ: ಮುರಗೋಳಿ, ಪೇರಲ್ದಕಟ್ಟ ಪರಿಸರದಲ್ಲಿ ಹಲವು ವರ್ಷಗಳಿಂದ ಯಾವುದೇ ಗೌರವಧನ ಪಡೆಯದೆ ಪಂಚಾಯಿತಿ ಕುಡಿಯುವ ನೀರಿನ ಪಂಪ್ ಆಪರೇಟರ್ ಆಗಿ ಸೇವೆ ಸಲ್ಲಿಸುತ್ತಿರುವ ಅನಿಲ್ ಕುಮಾರ್, ಅಮ್ಮನೊಟ್ಟು, ಮುರಗೋಳಿ ಪರಿಸರದಲ್ಲಿ ದಾರಿದೀಪ ನಿರ್ವಹಣೆ ಮಾಡುತ್ತಿರುವ ಶಂಕರ ಪೂಜಾರಿ, ಆಗಸ್ಟಿನ್ ರೋಡ್ರಿಗಸ್ ಅವರನ್ನು ಗೌರವಿಸಲಾಯಿತು.

ಭೂ ನ್ಯಾಯ ಮಂಡಳಿ, ಗ್ರಾಪಂ ಸದಸ್ಯ ರಮೇಶ್ ಶೆಟ್ಟಿ, ಮುರಗೋಳಿ ಫ್ರೆಂಡ್ಸ್ ಆರ್ಥಿಕವಾಗಿ ಹಿಂದುಳಿದ ಬಡ ಐದು ಕುಟುಂಬಗಳಿಗೆ ಅಕ್ಕಿ ವಿತರಿಸಿದರು. ಪಂಚಾಯಿತಿ ಸದಸ್ಯೆ ಕುಸುಮಾ, ರಮೇಶ್, ಸಂದೀಪ್ ಆಚಾರ್ಯ, ಯತೀಶ್ ಕುಮಾರ್, ಉಮೇಶ್ ಶೆಟ್ಟಿ, ಶಂಕರ ದೇವಾಡಿಗ, ಸತೀಶ್ ಶೆಟ್ಟಿ, ರತ್ನಾಕರ ಹೆಗ್ಡೆ ಭಾಗವಹಿಸಿದ್ದರು. ಮುರಗೋಳಿ ಫ್ರೆಂಡ್ಸ್ ಪ್ರಮುಖರಾದ ಸುರೇಂದ್ರ, ಪ್ರವೀಣ, ಸಂದೀಪ್, ಸುರೇಶ, ಮಂಜುನಾಥ, ವಸಂತ, ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net