

ಗುರುಪುರ: ಅಡ್ಡೂರಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿಯ ಬೆನಕ ಮಂಟಪದ ನೂತನ ಕಾರ್ಯಾಲಯವನ್ನು ಭಾನುವಾರ ಅಡ್ಡೂರು ಶ್ರೀ ಮುಖ್ಯಪ್ರಾಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರಿಶ್ಚಂದ್ರ ಅಮೀನ್ ಬರ್ಕೆ ಉದ್ಘಾಟಿಸಿದರು.
ಶ್ರೀ ಮುಖ್ಯಪ್ರಾಣ ದೇವಸ್ಥಾನದ ಅರ್ಚಕ ಚಂದ್ರಶೇಖರ ಭಟ್ ಗಣಹೋಮ, ಗಣಪತಿ ಪೂಜೆ ನೆರವೇರಿಸಿದರು. ಶ್ರೀ ಸಾರ್ವಜನಿಕ ಗಣೇಶೋತ್ಸವ ಸೇವಾ ಸಮಿತಿ ಅಧ್ಯಕ್ಷ ಯಶೋಧರ ಅಡ್ಡೂರು, ಅಮಿತಾ ವೈ.ಅಡ್ಡೂರು, ಕಾರ್ಯಾಲಯ ನಿರ್ಮಾಣದ ಪೂರ್ಣ ವೆಚ್ಚ ಭರಿಸಿರುವ ಧನಂಜಯ ಭಟ್ ಗಂದಾಡಿ, ಗೌರವ ಸಲಹೆಗಾರ ನೂಯಿ ಬಾಲಕೃಷ್ಣ ರಾವ್, ಗೌರವಾಧ್ಯಕ್ಷ ಲೋಕನಾಥ ಪೊನ್ನೆಲ, ಪ್ರಧಾನ ಕಾರ್ಯದರ್ಶಿ ನವೀನ್ ಆಚಾರ್ ಅಡ್ಡೂರು, ಉಪಾಧ್ಯಕ್ಷರಾದ ಸದಾಶಿವ ಲಚ್ಚಿಲ್, ನಾಗೇಶ್ ರಾಯರಬೆಟ್ಟು, ದಿನಕರ ಅಡ್ಡೂರು, ಜತೆ ಕಾರ್ಯದರ್ಶಿಗಳಾದ ಚಂದ್ರಹಾಸ ರಾಯರಬೆಟ್ಟು, ಶೇಖರ ಕೋಡಿಬೆಟ್ಟು, ಆನಂದ ರಾಯರಬೆಟ್ಟು, ಕೋಶಾಧಿಕಾರಿ ಕಿರಣ್ ಶೆಟ್ಟಿ ಕೋಡಿಬೆಟ್ಟು, ಯಾದವ ಕೋಡಿಬೆಟ್ಟು, ನವೀನ್ ಅಮೀನ್ ಪೊನ್ನೆಲ, ದುಗಾಪ್ರಸಾದ್ ನೂಯಿ, ಕಮಲ್ ಪೂಜಾರಿ ನೂಯಿ, ಪ್ರವೀಣ್ ಕುಮಾರ್ ಅಮ್ಮುಂಜೆ, ಅಕ್ಷಯ್ ಪೊಳಲಿ, ಸುಳ್ಯಗುತ್ತು ಸುಬ್ಬಯ್ಯ ಭಂಡಾರಿ, ಯಶವಂತ ಪೂಜಾರಿ ಪೊಳಲಿ, ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಗ್ರಾಮಸ್ಥರು ಇದ್ದರು.