

ತುಮಕೂರು
ಕಾಂಗ್ರೆಸ್‌ನ ಪೇಸಿಎಂ ಅಭಿಯಾನದ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿರುವ ವೀರಶೈವ-ಲಿಂಗಾಯತ ಹಾಗೂ ದಲಿತ, ಹಿಂದುಳಿದ ವರ್ಗಗಳ ಮಠಾಧೀಶರು ಭ್ರಷ್ಟಚಾರವು ನಮ್ಮಲ್ಲಿ ಬೇರೂರಿದ್ದು ಇದು ಇವತ್ತುನಿನ್ನೆಯದೆಲ್ಲ. ಸ್ವಾತಂತ್ರ ಬಂದು 75 ವರ್ಷಗಳಿಂದಲು ಎಲ್ಲಾ ಸರ್ಕಾರದಲ್ಲೂ ಇದ್ದಿದ್ದೆ ಎಂದು ಹೇಳುವ ಮೂಲಕ ಭ್ರಷ್ಟಾಚಾರವನ್ನು ಸಮರ್ಥಸಿಕೊಂಡಿದ್ದಾರೆ.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಮಂಗಳವಾರ ತಿಪಟೂರಿನ ಷಡಕ್ಷರಿ ಮಠದ ಶ್ರೀ ರುದ್ರಮುನಿ ಸ್ವಾಮೀಜಿ, ದಲಿತ ಹಿಂದುಳಿದ ಮಠಾೀಶರ ಒಕ್ಕೂಟದ ಅಧ್ಯಕ್ಷ ಶ್ರೀ ಜ್ಞಾನಾನಂದ ಪುರಿ ಸ್ವಾಮೀಜಿ ನೇತೃತ್ವದಲ್ಲಿ 30ಕ್ಕೂ ಹೆಚ್ಚು ಮಠಾೀಶರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಸಿಎಂ ಬಸವರಾಜು ಬೊಮ್ಮಾಯಿ ಪರ ಬ್ಯಾಟ್ ಬೀಸಿದರು. ವೈಯಕ್ತಿಕ ದ್ವೇಷ, ಸ್ವಾರ್ಥಕ್ಕಾಗಿ ನಮ್ಮ ರಾಜ್ಯದ ಸಂಸ್ಕೃತಿ, ಪರಂಪರೆ ಹಾಳುವ ಮಾಡುವ ಘಟನೆಗಳನ್ನು ಇತ್ತೀಚೆಗೆ ನಡೆಯುತ್ತಿದ್ದು ರಾಜಕೀಯ ವ್ಯವಸ್ಥೆಯಲ್ಲಿ ಅರಾಜಕತೆ ಸೃಷ್ಟಿಸುವ ಹುನ್ನಾರ ನಡೆಸಲಾಗುತ್ತಿದೆ ಎಂದು ಶ್ರೀ ರುದ್ರಮುನಿ ಸ್ವಾಮೀಜಿ ಗುಡುಗಿದರು.
ಸುದ್ದಿಗೋಷ್ಠಿಯಲ್ಲಿ ಚಿತ್ರದುರ್ಗದ ಬಂಜಾರ ಜನಾಂಗದ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಶ್ರೀ ವನಕಲ್ಲು ಮಲ್ಲೇಶ್ವರ ಮಹಾಸಂಸ್ಥಾನ ಮಠದ ಶೀ ಬಸವರಮಾನಂದ ಸ್ವಾಮೀಜಿ, ಮೂಕನಹಳ್ಳಿ ಜಂಗಮಮಠದ ಶ್ರೀ ಗಂಗಾಧರ ಸ್ವಾಮೀಜಿ, ಚಕ್ರಬಾವಿ ಜಂಗಮಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ತಮ್ಮಡಿಹಳ್ಳಿ ಮಠದ ಶ್ರೀ ಸಿದ್ದಲಿಂಗ ದೇಶಿಕೇಂದ್ರ ಸ್ವಾಮೀಜಿ, ಬಿಳಿಲೆ ಹಿರೇಮಠದ ರಾಚೋಲೇಶ್ವರ ಶಿವಾಚಾರ್ಯ ಸ್ವಾಮೀಜಿ, ಮಾದಿಹಳ್ಳಿ ಹಿರೇಮಠದ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ತರೀಕೆರೆ ಉಡೇವು ಬೃಹನ್ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ದೊಡ್ಡ ಮೇಟಿಕುರ್ಕೆ ಬೂದಿಹಾಳ ಮಠದ ಶಶಿಶೇಖರ ಸಿದ್ದಬಸವ ಸ್ವಾಮೀಜಿ ಸೇರಿದಂತೆ 35ಕ್ಕೂ ಹೆಚ್ಚು ಮಠಾೀಶರು ಹಾಜರಿದ್ದರು.
ಸ್ವಾತಂತ್ರ್ಯ ಬಂದು 75 ವರ್ಷಗಳಲ್ಲಿ ಕ್ಲೀನ್‌ಚಿಟ್ ಸರ್ಕಾರ ನೋಡಿಲ್ಲ. ಭ್ರಷ್ಟಾಚಾರ ವಿಷಯದಲ್ಲಿ ಕಡಿಮೆ, ಜಾಸ್ತಿ ಇದ್ದಿದೆ. ಇಡೀ ವ್ಯವಸ್ಥೆನೇ ಹದಗೆಟ್ಟಿದ್ದು ಎಷ್ಟೇ ಒಳ್ಳೆಯವರಾದರು ಆ ಕಪಿಮುಷ್ಠಿಗೆ ಸಿಲುಕಿಕೊಳ್ಳಬೇಕಾಗುತ್ತದೆ. ವ್ಯಕ್ತಿಗತ ಚಾರಿತ್ರ್ಯ ಹರಣ ಮಾಡುವುದಲ್ಲ. ಸತ್ಯತೆ, ನೈಜತೆ ಇರಬೇಕು.
ಶ್ರೀ ಜ್ಞಾನಾನಂದಪುರಿ ಸ್ವಾಮೀಜಿ
ಅಧ್ಯಕ್ಷ, ದಲಿತ, ಹಿಂದುಳಿದ ಮಠಾೀಶರ ಒಕ್ಕೂಟ