ಹೊಸ ವರ್ಷದ ಆರಂಭದಲ್ಲೇ ಕರೊನಾ ಹ್ಯಾಟ್ರಿಕ್​: ಮೊದಲ ಮೂರು ದಿನವೂ ಸಾವಿರ ದಾಟಿದ ಪ್ರಕರಣ..

Corona
Published on

ಬೆಂಗಳೂರು: ರಾಜ್ಯದಲ್ಲಿ ಹೊಸ ವರ್ಷದ ಆರಂಭದಲ್ಲೇ ಕರೊನಾ ಹ್ಯಾಟ್ರಿಕ್​ ಬಾರಿಸಿದೆ. ಅಂದರೆ ನೂತನ ವರ್ಷದ ಮೊದಲ ಮೂರೂ ದಿನವೂ ಕರೊನಾ ಪ್ರಕರಣಗಳ ಸಂಖ್ಯೆ ಸಾವಿರ ದಾಟಿದೆ. ಈ ಮೂಲಕ ಕಳೆದ ಮೂರೂವರೆ ತಿಂಗಳ ಬಳಿಕ ಕರೊನಾ ಪ್ರಕರಣಗಳ ಸಂಖ್ಯೆ ಮತ್ತೆ ಸಾವಿರದ ಗಡಿ ದಾಟಿದಂತಾಗಿದೆ.

ರಾಜ್ಯದಲ್ಲಿ ಜನವರಿ 1ರಂದು 1033, ಜ. 2ರಂದು 1,187 ಜನರಲ್ಲಿ ದೃಢಪಟ್ಟಿದ್ದ ಕರೊನಾ, ಇಂದು 1,290 ಮಂದಿಯಲ್ಲಿ ದೃಢಪಟ್ಟಿದೆ. ಈ ಮೂಲಕ ಮೂರೂವರೆ ತಿಂಗಳ ಬಳಿಕ, ಅದೂ ಹೊಸ ವರ್ಷದ ಆರಂಭದಲ್ಲೇ ಸತತ ಮೂರೂ ದಿನ ಸಾವಿರಕ್ಕೂ ಅಧಿಕ ಕರೊನಾ ಪ್ರಕರಣಗಳು ದಾಖಲಾದಂತಾಗಿದೆ.

ರಾಜ್ಯದಲ್ಲಿ ಇಂದು 1,290 ಸೋಂಕು ದೃಢಪಟ್ಟಿದ್ದರೂ ಆ ಪೈಕಿ ರಾಜಧಾನಿಯಲ್ಲೇ ಅತ್ಯಧಿಕ ಅಂದರೆ 1,041 ಪ್ರಕರಣಗಳು ಕಂಡುಬಂದಿವೆ. ಇದರೊಂದಿಗೆ ರಾಜ್ಯದಲ್ಲಿನ ಕರೊನಾ ಸೋಂಕಿನ ಪಾಸಿಟಿವಿಟಿ ರೇಟ್​ ಶೇ. 1.6ಕ್ಕೆ ಏರಿದೆ. ಮತ್ತೊಂದೆಡೆ ರಾಜ್ಯದಲ್ಲಿ ಇದುವರೆಗೆ 77 ಮಂದಿಯಲ್ಲಿ ಒಮಿಕ್ರಾನ್ ಸೋಂಕು ದೃಢಪಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net