

ಬೆಂಗಳೂರು: ನಿನ್ನೆಯಷ್ಟೇ ರಾಜ್ಯದಲ್ಲಿ ಇದ್ದಕ್ಕಿದ್ದಂತೆ ಒಮಿಕ್ರಾನ್ ಒಂದೇ ಸಲಕ್ಕೆ ತೀವ್ರ ಹೆಚ್ಚಳ ಕಂಡಿದ್ದು, ಇದೀಗ ಕರೊನಾ ಪ್ರಕರಣದಲ್ಲೂ ದೊಡ್ಡ ಏರಿಕೆ ಕಂಡಿದ್ದು, ಆತಂಕದ ವಾತಾವರಣ ಮೂಡಿಸಿದೆ.
ಸುಮಾರು ಮೂರೂವರೆ ತಿಂಗಳ ಬಳಿಕ ಮತ್ತೆ ದೈನಂದಿನ ಕೋವಿಡ್ ಕೇಸ್ ಸಾವಿರವನ್ನು ದಾಟಿದೆ. ಇವತ್ತೊಂದೇ ದಿನ ರಾಜ್ಯದಲ್ಲಿ 1033 ಕೋವಿಡ್ ಪ್ರಕರಣ ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿನ ಸಕ್ರಿಯ ಕೋವಿಡ್-19 ಪ್ರಕರಣ 9386ಕ್ಕೆ ತಲುಪಿದೆ.
ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಪರಿಸ್ಥಿತಿ ವಿಪರೀತ ಎಂಬಂತಿದೆ. ಅಂದರೆ ರಾಜ್ಯದಲ್ಲಿ 1033 ಪ್ರಕರಣಗಳ ಪೈಕಿ ಬೆಂಗಳೂರು ಒಂದರಲ್ಲೇ 810 ಪ್ರಕರಣಗಳು ಪತ್ತೆಯಾಗಿವೆ. ಕಳೆದ ಸೆ.17ರಂದು 1003 ಕೋವಿಡ್ 19 ದೃಢಪಟ್ಟಿತ್ತು. ಅದಾದ ಮೇಲೆ ಇಂದು ಕೋವಿಡ್ ಮತ್ತೆ ಸಾವಿರದ ಗಡಿ ದಾಟಿದ್ದು, ಎಚ್ಚರಿಕೆಯ ಗಂಟೆಯನ್ನು ಬಾರಿಸಿದೆ.