ಒಂದೇ ಜಾಗದಲ್ಲಿ ನೂರಾರು ಕುರಿಗಳ ಸಾವು; ಸಾವಿನ ನಿಖರ ಕಾರಣವಿನ್ನೂ ನಿಗೂಢ!

S
Published on

ಚಿಕ್ಕಮಗಳೂರು: ಒಂದೇ ಜಾಗದಲ್ಲಿ ನೂರಾರು ಕುರಿಗಳು ಸತ್ತು ಬಿದ್ದಿರುವುದು ಕುತೂಹಲ ಕೆರಳಿಸುವ ಜತೆಗೆ ಆತಂಕವನ್ನೂ ಮೂಡಿಸಿದೆ. ಮತ್ತೊಂದೆಡೆ ಸಾಯುತ್ತಿರುವ ಕುರಿಗಳ ಸಂಖ್ಯೆ ಹೆಚ್ಚುತ್ತಿರುವುದು ಕೂಡ ಸ್ಥಳೀಯರಲ್ಲಿ ಚಿಂತೆಯನ್ನು ಉಂಟು ಮಾಡಿದೆ.

ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಎರೆಹಳ್ಳಿಯಲ್ಲಿ ಒಂದೇ ಜಾಗದಲ್ಲಿ 120 ಕುರಿಗಳು ಸಾವಿಗೀಡಾಗಿವೆ. ಈ ನಡುವೆ ಮತ್ತಷ್ಟು ಕುರಿಗಳು ಸಾವಿಗೀಡಾಗುತ್ತಿವೆ. ಶಿರಾ-ಹಿರಿಯೂರಿನಿಂದ ಬಂದಿರುವ ಈ ಕುರಿಗಳ ಹಿಂಡು ನಿನ್ನೆ ಸಂಜೆಯ ಮಳೆಯಲ್ಲಿ ನೆನೆದು ಅಸ್ವಸ್ಥಗೊಂಡು ಸಾವಿಗೀಡಾಗಿವೆ ಎಂಬ ಶಂಕಿಸಲಾಗಿದ್ದರೂ ಇವುಗಳ ಸಾವಿನ ಕುರಿತ ಕಾರಣವಿನ್ನೂ ನಿಗೂಢವಾಗಿಯೇ ಇದೆ.

ಸ್ಥಳಕ್ಕೆ ತಹಶೀಲ್ದಾರ್ ಹಾಗೂ ಪಶುವೈದ್ಯರ ಭೇಟಿ ನೀಡಿ, ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಸತ್ತ ಕುರಿಗಳ ಮರಣೋತ್ತರ ಪರೀಕ್ಷೆಯನ್ನು ನಡೆಸುತ್ತಿರುವ ಅಧಿಕಾರಿಗಳು ಸಾವಿಗೆ ಕಾರಣ ಕಂಡುಕೊಳ್ಳಲು ಮುಂದಾಗಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಳಿಕ ನಿಖರ ಕಾರಣ ತಿಳಿಯುವ ನಿರೀಕ್ಷೆಯಲ್ಲಿ ಅಧಿಕಾರಿಗಳಿದ್ದಾರೆ ಎನ್ನಲಾಗಿದೆ.

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net