More

    ಉದ್ಯೋಗಿಗಳಿಗೆ ಗುಡ್​ ನ್ಯೂಸ್​! ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಾಗಲಿದೆ ವೇತನ

    ನವದೆಹಲಿ: ಕರೊನಾದಿಂದ ಕೆಂಗಟ್ಟು ಇದೀಗ ಚೇತರಿಕೆ ಕಾಣುತ್ತಿರುವ ಭಾರತದ ಕಂಪನಿಗಳು 2021ರಲ್ಲಿ ತಮ್ಮ ಉದ್ಯೋಗಿಗಳ ವೇತನವನ್ನು ಶೇ. 7.7 ಹೆಚ್ಚಳ ಮಾಡುವ ಸಾಧ್ಯತೆಯಿದೆ ಎನ್ನುವುದು ಸಮೀಕ್ಷೆಯೊಂದರಿಂದ ತಿಳಿದುಬಂದಿದೆ.

    ಜಾಗತಿಕ ವೃತ್ತಿಪರ ಸೇವಾ ಸಂಸ್ಥೆ ಅಯಾನ್ ಪಿಎಲ್ಸಿ ಈ ಕುರಿತಾಗಿ ಸಮೀಕ್ಷೆ ನಡೆಸಿದೆ. ಈ ಸಂಸ್ಥೆ ಕಳೆದ ವರ್ಷವೂ ಸಮೀಕ್ಷೆ ನಡೆಸಿತ್ತು. ಆಗ ಶೇ. 75 ಸಂಸ್ಥೆಗಳು ವೇತನ ಹೆಚ್ಚಳ ಮಾಡುವುದಾಗಿ ತಿಳಿಸಿದ್ದವು. ಈ ವರ್ಷ ಶೇ. 88 ಸಂಸ್ಥೆಗಳು ವೇತನ ಹೆಚ್ಚಳ ಮಾಡಲು ಬಯಸುತ್ತಿವೆ.

    ಈ ಪ್ರಮಾಣದ ವೇತನ ಪರಿಷ್ಕರಣೆ BRIC ರಾಷ್ಟ್ರಗಳ ಪೈಕಿ ಅತಿ ಹೆಚ್ಚಿನದ್ದಾಗಿರಲಿದ್ದು, 2020 ರಲ್ಲಿ ಮಾಡಲಾಗಿದ್ದ ಶೇ.6.1 ರಷ್ಟು ವೇತನ ಹೆಚ್ಚಳಕ್ಕಿಂತಲೂ ಅಧಿಕವಾಗಿರಲಿದೆ ಎಂದು ಸಮೀಕ್ಷೆ ತಿಳಿಸಿದೆ. 20ಕ್ಕೂ ಹೆಚ್ಚು ಕ್ಷೇತ್ರಗಳ 1200 ಕಂಪನಿಗಳಲ್ಲಿ ಈ ಸಮೀಕ್ಷೆ ನಡೆಸಲಾಗಿದೆ. (ಏಜೆನ್ಸೀಸ್​)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಈಗಿನ ಹಿಮಪಾತದಲ್ಲಿ ಬೀಳುತ್ತಿರುವ ಹಿಮ ಬೆಂಕಿಗೆ ಕರಗುವ ಬದಲಾಗಿ ಹೊತ್ತಿ ಉರಿಯುತ್ತೆ!

    ಕೃಷಿ ಕಾಯ್ದೆ ವಿರೋಧಿ ಹೋರಾಟದಲ್ಲಿ ಪಾಕಿಸ್ತಾನದ ಧ್ವಜ! ಸಾಗರೋತ್ತರ ಕಾಂಗ್ರೆಸ್ ಕೆಲಸವೆಂದು ದೂರಿದ ಬಿಜೆಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts