ಕೆಪಿಎಸ್‌ಸಿ ಗೆಜೆಟ್‌ ಪ್ರೊಬೇಷನರಿ 348 ಹುದ್ದೆಗಳಿಗೆ ಜಿಲ್ಲೆಯೊಂದರಲ್ಲೇ ಪರೀಕ್ಷೆ ಬರೆದ 2 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು

KPSC-EXAM-checking.
Published on

ಕಾರವಾರ: ಗೆಜೆಟ್ ಪ್ರೊಬೇಷನರಿ ಗ್ರೂಪ್ ಎ ಮತ್ತು ಬಿ ವೃಂದದ 384 ಹುದ್ದೆಗಳ ನೇಮಕಾತಿಗೆ ಕೆಪಿಎಸ್‌ಸಿ ಕೈಗೊಂಡಿರುವ ಪೂರ್ವಭಾವಿ ಲಿಖಿತ ಪರೀಕ್ಷೆಯು ಕಾರವಾರದ 15 ಕೇಂದ್ರಗಳಲ್ಲಿ ಮಂಗಳವಾರ ನಡೆಯಿತು. ಸುಮಾರು 2 ಸಾವಿರಕ್ಕೂ ಅಽಕ ಅಭ್ಯರ್ಥಿಗಳು ಪರೀಕ್ಷೆ ಬರೆದರು.
ಬೆಳಗ್ಗೆ 10 ರಿಂದ 12 ರವರೆಗೆ ಸಾಮಾನ್ಯ ಜ್ಞಾನಕ್ಕೆ ಸಂಬಂಧಪಟ್ಟ ಪರೀಕ್ಷೆ ನಡೆದಿದ್ದು, ಹೆಸರು ನೋಂದಾಯಿಸಿದ್ದ 4,316 ಅಭ್ಯರ್ಥಿಗಳ ಪೈಕಿ 2017 ಅಭ್ಯರ್ಥಿಗಳು ಹಾಜರಾಗಿದ್ದರು.
ಮಧ್ಯಾಹ್ನ 2 ರಿಂದ 4 ಗಂಟೆಯವರೆಗೆ ಅಭ್ಯರ್ಥಿಗಳು ಆಯ್ದುಕೊಂಡ ನಿಽðಷ್ಟ ವಿಷಯಕ್ಕೆ ಸಂಬಂಧಿಸಿದ ಪರೀಕ್ಷೆ ನಡೆದಿದ್ದು, ಹೆಸರು ನೋಂದಾಯಿಸಿದ 4316 ಅಭ್ಯರ್ಥಿಗಳ ಪೈಕಿ 2015 ಅಭ್ಯರ್ಥಿಗಳು ಪರೀಕ್ಷೆ ಬರೆದರು. ಪರೀಕ್ಷೆ, ಸುಸೂತ್ರವಾಗಿ, ಆಕ್ಷೇಪಣೆ ಇಲ್ಲದೇ ನಡೆಸುವ ಸಲುವಾಗಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಲಾಗಿತ್ತು.
ಪರೀಕ್ಷೆಗೆ ತೆರಳುವ ಅಭ್ಯರ್ಥಿಗಳನ್ನು ಮೆಟಲ್ ಡಿಟೆಕ್ಟರ್ ಮೂಲಕ ಪರಿಶೀಲಿಸಿ ಒಳಬಿಡಲಾಯಿತು. ಅಭ್ಯರ್ಥಿಗಳಿಗೆ ಡ್ರೆಸ್ ಕೋಡ್ ಅಳವಡಿಸಲಾಗಿತ್ತು. ಕೇಂದ್ರಗಳ ಸುತ್ತ ನಿಷೇಧಾಜ್ಞೆ ಹೊರಡಿಸಿ, ಸಾಕಷ್ಟು ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಜಿಲ್ಲಾಧಿಕಾರಿ ಕೆ.ಲಕ್ಷ್ಮೀ ಪ್ರಿಯಾ, ಜಿಪಂ ಸಿಇಒ ಈಶ್ವರ ಕಾಂದೂ, ಎಸ್‌ಪಿ ಎಂ.ನಾರಾಯಣ ಸ್ವತಃ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರೀಕ್ಷೆಯ ಹಿನ್ನೆಲೆಯಲ್ಲಿ ಹೆಚ್ಚುವರಿ ಬಸ್‌ಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಆದರೂ ಹುಬ್ಬಳ್ಳಿ, ಶಿರಸಿ ಭಾಗದ ಬಸ್‌ಗಳು ಸಾಮರ್ಥ್ಯಕ್ಕಿಂತ ಹೆಚ್ಚು ಜನರನ್ನು ತುಂಬಿಕೊAಡು ಓಡಾಟ ನಡೆಸಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net