100ಕ್ಕೂ ಹೆಚ್ಚು ಜಾನುವಾರುಗಳಿಗೆ ಚಿಕಿತ್ಸೆ

16-JAN-GPT-2
ಗುಂಡ್ಲುಪೇಟೆ ತಾಲೂಕಿನ ಕೊಡಸೋಗೆ ಗ್ರಾಮದಲ್ಲಿ ಪಶು ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
Published on

ಗುಂಡ್ಲುಪೇಟೆ: ಕೃಷಿ ವಿಜ್ಞಾನ ಕೇಂದ್ರ ಹಾಗೂ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಉಪಯೋಜನೆಯಡಿ ತಾಲೂಕಿನ ಕೊಡಸೋಗೆ ಗ್ರಾಮದಲ್ಲಿ ಪಶು ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಗ್ರಾಮದ 60ಕ್ಕೂ ಹೆಚ್ಚಿನ ರೈತರ ಸುಮಾರು 100ಕ್ಕೂ ಹೆಚ್ಚು ಜಾನುವಾರುಗಳಿಗೆ ಹೈನು ರಾಸುಗಳಲ್ಲಿ ಕಂಡು ಬರುವ ಸಾಮಾನ್ಯ ಸಮಸ್ಯೆಗಳು ಮತ್ತು ಇತರ ರೋಗ ರುಜಿನಗಳಿಗೆ ಚಿಕಿತ್ಸೆ ನೀಡಿ, ಜಾನುವಾರು ಪೋಷಣೆಗಾಗಿ ಸಮತೋಲನ ಆಹಾರದ ಪೂರೈಕೆ, ಪಶುಗಳ ಉತ್ತಮ ಆರೋಗ್ಯ ಮತ್ತು ಶುದ್ಧ ಹಾಲು ಉತ್ಪಾದನೆಗೆ ಪರಭಕ್ಷಕ ಕೀಟ ಮತ್ತು ರೋಗ ನಿರ್ವಹಣೆಯ ಕುರಿತು ಜಾಗೃತಿ ಮೂಡಿಸಲಾಯಿತು. ಕಾಲ ಕಾಲಕ್ಕೆ ಜಾನುವಾರುಗಳಿಗೆ ಸೂಕ್ತ ಲಸಿಕೆಯನ್ನು ಕೊಡಿಸುವುದರಿಂದ ಪಶುಗಳ ಪರಭಕ್ಷಕ ಕೀಟಗಳು, ಕಾಲುಬಾಯಿ ರೋಗ, ಚರ್ಮಗಂಟು ರೋಗ, ಕೆಚ್ಚಲುಬಾವು ರೋಗಗಳ ಮತ್ತು ಇತರ ರೋಗಗಳ ನಿರ್ವಹಣೆ ಮಾಡುವುದರ ಜತೆಗೆ ಜಾನುವಾರುಗಳ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಮಾಹಿತಿ ನೀಡಿದರು.

ಈ ಕಾರ್ಯಕ್ರಮದಲ್ಲಿ ಪಶುವೈದ್ಯಕೀಯ ಅಧಿಕಾರಿಗಳಾದ ಡಾ.ಮನೋಹರ್, ಡಾ.ನಾಗೇಂದ್ರಸ್ವಾಮಿ, ಜಾನುವಾರು ಅಭಿವೃದ್ಧಿ ಅಧಿಕಾರಿ ಮೃತ್ಯುಂಜಯ, ಪಶು ವೈದ್ಯಕೀಯ ಪರೀಕ್ಷಕರಾದ ಮಹೇಶ ಸುನಗದ್, ಬಾಲಸುಬ್ರಹ್ಮಣ್ಯ, ಸಿಬ್ಬಂದಿ ನಾಗಪ್ಪ, ಸಿದ್ದರಾಜು, ಹಿರಿಯ ಸಂಶೋಧನಾ ಸಹಾಯಕ ಮೋಹನ್‌ಕುಮಾರ್, ಯೋಜನಾ ಸಹಾಯಕ ಮಂಜುನಾಥ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net