ಮುಲಕನಾಡು ಪಂಗಡ ಬಗ್ಗೆ ಇನ್ನಷ್ಟು ಸಂಶೋಧನೆ ಅಗತ್ಯವಿದೆ

mulu
Published on

ಬೆಂಗಳೂರು: ದೇಶದ ಸಂಸ್ಕೃತಿ, ಸಂಪ್ರದಾಯ, ಆಚಾರ-ವಿಚಾರ ಉಳಿಸಿ ಬೆಳೆಸುವಲ್ಲಿ ಮುಂಚೂಣಿಯಲ್ಲಿರುವ ಮುಲಕನಾಡು ಪಂಗಡ ಕುರಿತು ಹೆಚ್ಚು ಸಂಶೋಧನೆ ನಡೆಯುವ ಅಗತ್ಯವಿದೆ ಎಂದು ಹಿರಿಯ ಸಂಶೋಧಕ ಡಾ. ಬಾಬು ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.

ಗಿರಿನಗರದ ಶಂಕರಮಠ ಆವರಣದಲ್ಲಿ ಶನಿವಾರ ಆಯೋಜಿಸಲಾಗಿದ್ದ "ಲೇಖಕ ಕೆ.ಎಸ್​. ರಾಮಮೂರ್ತಿ ರಚಿಸಿರುವ "ಕೋಲಾರ ಜಿಲ್ಲಾ ಮುಲಕನಾಡು ಬ್ರಾಹ್ಮಣರು' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮುಲಕನಾಡು ಪಂಗಡವೂ ಸೇರಿ ಅನೇಕ ಬ್ರಾಹ್ಮಣ ಪಂಗಡಗಳೂ ಸಮಾಜದಲ್ಲಿ ನಿಸ್ವಾರ್ಥವಾಗಿ ಕೆಲಸ ಮಾಡುತ್ತಿವೆ. ಸನಾತನ ವೇದ, ಪುರಾಣಾಗಮ, ಉಪನಿಷತ್​, ಭಗವದ್ಗೀತೆ ಮತ್ತು ಪ್ರಶ್ನಾತ್ರಯ ಮುಂತಾದ ಅಮೂಲ್ಯ ದಾಖಲೆಗಳ ಉಳಿವಿಗೆ ಕಾರಣೀಭೂತವಾಗಿವೆ. ಈ ದಿಶೆಯಲ್ಲಿ ಪಂಗಡ ಕುರಿತು ಇನ್ನಷ್ಟು ಸಂಶೋಧನೆ ನಡೆಯುವ ಕಾರ್ಯ ತಕ್ಷಣ ಆಗಬೇಕಿದೆ ಎಂದರು.

ಹಾಸ್ಯ ಬರಹಗಾರ ಎಂ.ಎಸ್​.ನರಸಿಂಹಮೂರ್ತಿ ಮಾತನಾಡಿ, ದೇಶ ಕಟ್ಟುವ ಕಾರ್ಯಕ್ಕೆ ಸಮರ್ಪಿಸಿಕೊಳ್ಳುವ ಯುವಶಕ್ತಿಗೆ ಸ್ಫೂರ್ತಿ ತುಂಬುವ ಕೆಲಸವನ್ನು ಮುಲಕನಾಡು ಸಮುದಾಯ ಮಾಡುತ್ತಿದೆ. ಸಮಾಜದ ಏಳಿಗೆಗೆ ಆನೇಕ ಕಾರ್ಯಗಳನ್ನೂ ಮಾಡಿದೆ ಎಂದರು. ಸಂಶೋಧಕ ಡಾ. ಆರ್​.ಶೇಷಶಾಸ್ತ್ರಿ, ಲೇಖಕ ಕೆ.ಎಸ್​.ರಾಮಮೂರ್ತಿ ಸೇರಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net