ಪ್ರತಿಯೊಬ್ಬರೂ ಎಲ್ಲ ಸಮಾಜವನ್ನು ಗೌರವಿಸಿ:ಶೃಂಗೇರಿ ಶ್ರೀಗಳು ಸಲಹೆ

shree
Published on

ಬೆಂಗಳೂರು: ಎಲ್ಲ ಸಮಾಜವನ್ನು ಪ್ರತಿಯೊಬ್ಬರೂ ಗೌರವದಿಂದ ಕಾಣುವಂತಾಗಬೇಕೆಂದು ದಣಾಮ್ಮಾಯ ಶ್ರೀ ಶೃಂಗೇರಿ ಶಾರದಪೀಠದ ಪೀಠಾಧೀಶ ಶ್ರೀ ವಿಧುಶೇಖರಭಾರತಿ ಸ್ವಾಮೀಜಿ ಹೇಳಿದ್ದಾರೆ.

ಶೃಂಗೇರಿ ಶಾರದಪೀಠ ವತಿಯಿಂದ ಚಾಮರಾಜಪೇಟೆಯ ಶ್ರೀ ಶೃಂಗೇರಿ ಶಂಕರಮಠದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸವಿತಾ ಸಮಾಜ ಕುರಿತು ಆಶೀರ್ವಚನ ನೀಡಿದರು.

ಸವಿತಾ ಸಮುದಾಯದವರು ಕ್ಷೌರಿಕ ವೃತ್ತಿ ಮೂಲಕ ನಮ್ಮೆಲ್ಲರನ್ನೂ ಸುಂದರವಾಗಿ ಕಾಣಿಸುತ್ತಾರೆ. ವಾದ್ಯ ಸೇವೆ ದೇವರ ಸೇವೆಯಾಗಿದೆ. ಮಂಗಲವಾದ್ಯ ವಿಶೇಷ ವೃತ್ತಿಯಾಗಬೇಕು. ಮಂಗಳವಾದ್ಯ ನುಡಿಸುವ ಸಮುದಾಯವನ್ನು ಕಂಡರೆ ಎಲ್ಲವೂ ಮಂಗಳವಾಗಲಿದೆ. ಈ ವೃತ್ತಿಗೆ ಶಾಶ್ವತವಾದ ನೆಲೆ, ಬೆಲೆ, ಗೌರವ ಸಿಗುವಂತಾಗಬೇಕು.ಸರ್ಕಾರದಿಂದಲೂ ಸೂಕ್ತ ಪೋತ್ಸಾಹ ದೊರೆಯುವಂತಾಗಲಿ ಎಂದು ಶ್ರೀಗಳು ಆಶಿಸಿದರು.

ಸವಿತಾ ಸಮಾಜದ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಎಸ್​.ನರೇಶ್​ ಕುಮಾರ್​ ಮಾತನಾಡಿ, ಸವಿತಾ ಸಮಾಜದವರಿಂದ ಮಂಗಳವಾದ್ಯ ಸೇವೆಗೆ ಅವಕಾಶಕ್ಕೆ ಶ್ರೀಗಳು ಒಪ್ಪಿಗೆ ನೀಡಿದ್ದಾರೆ. ಚಾತುರ್ಮಾಸದಲ್ಲಿ ಗುರುದರ್ಶನ ಮಾಡುವುದು ವಿಶೇಷವಾದದ್ದು. ಕಾರ್ಯಕ್ರಮದಿಂದ ಸಮುದಾಯದ ಕುರಿತು ಸಮಾಜದಲ್ಲಿರುವ ಅಭಿಪ್ರಾಯ ಬದಲಿ ಒಳ್ಳೆಯ ಅಭಿಪ್ರಾಯ ಮೂಡುವಂತೆ ಮಾಡುವುದಕ್ಕೆ ಸಹಕಾರಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಯಡತೊರೆ ಶ್ರೀ ಯೋಗಾನಂದೇಶ್ವರ ಸ್ವರಸತೀ ಮಠದ ಮಠಾಧೀಶ ಶ್ರೀ ಶಂಕರ ಭಾರತೀ ಸ್ವಾಮೀಜಿ ದಿವ್ಯ ಆಶೀರ್ವಚನ ನೀಡಿದರು. ಉಪ ತಹಶೀಲ್ದಾರ್​ ನಂದೀಶ್​, ಎಸಿಪಿ ನಾರಾಯಣಸ್ವಾಮಿ, ವಕೀಲ ನರಸಿಂಹರಾಜು ಸೇರಿ ಸವಿತಾ ಸಮುದಾಯದ ಸಾವಿರಾರು ಜನರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net