

ತುಮಕೂರು: ಇಂದಿಗೂ ದೇಶದಲ್ಲಿ ಸಂವಿಧಾನದ ಆಶಯಗಳಾದ ಸಮಾನತೆ, ಸ್ವಾತಂತ್ರೃ ಹಾಗೂ ಜಾತ್ಯಾತೀತೆ, ಸಮಾಜವಾದದ ಆಶಯಗಳನ್ನು ಈಡೇರಿಸಲು ನಮ್ಮಿಂದ ಸಾಧ್ಯವಾಗಿಲ್ಲ ಎಂದು ಕೇರಳ ಶಾಸಕಿ, ಮಾಜಿ ಆರೋಗ್ಯ ಸಚಿವೆ ಶೈಲಜಾ ಟೀಚರ್ ಬೇಸರಿಸಿದರು.
ನಗರದ ಗಾಜಿನಮನೆಯಲ್ಲಿ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಮಂಗಳವಾರ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಸಂವಿಧಾನದ ನೆರಳಲ್ಲಿ ಸ್ವಾಭಿಮಾನಿಯಾಗಿ ಮೇಲೆಳಲು ಹೊರಟ ಮಹಿಳೆಯನ್ನು ಮನುಸ್ಮತಿಯಡಿಯಲ್ಲಿ ತರಲಾಗಿದೆ ಎಂದರು.
ಹೆಣ್ಣು ಗಂಡಿನ ಸರಿಸಮ ಗುರುತಿಸಿಕೊಳ್ಳುವ, ತನ್ನ ಪ್ರತಿಭೆಯನ್ನು ತೋರ್ಪಡಿಸುವ ಅವಕಾಶದಿಂದ ವಂಚಿಸಲಾಗುತ್ತಿದೆ .ಮೊದಲು ಕುಟುಂಬದವರು ನಿರ್ಧರಿಸುತ್ತಿದ್ದು ಹೆಣ್ಣು ಮಕ್ಕಳ ರಕ್ಷಣೆ ಎಂಬ ಪದವನ್ನು ಕೆಲವರು ನೈತಿಕ ಪೊಲೀಸ್ ಗಿರಿ ಹೆಸರಿನಲ್ಲಿ ಹೆಣ್ಣು ಮಕ್ಕಳನ್ನು ನಿಯಂತ್ರಿಸುವ ಕೆಲಸವನ್ನು ಧಾರ್ಮಿಕ ಮೂಲಭೂತವಾದಿಗಳು ಮಾಡುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.