

ಕುಂದಾಪುರ: ವಿದ್ಯಾಸಂಸ್ಥೆಗಳು ನಮಗೆ ವಿದ್ಯೆ ನೀಡಿ ಸತ್ಪ್ರಜೆಗಳನ್ನಾಗಿ ರೂಪಿಸುತ್ತವೆ. ಇಂದಿನ ಮಕ್ಕಳಿಗೆ ಅವಕಾಶಗಳು ತುಂಬಾ ದೊರಕುತ್ತಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು. ಇಂದಿನ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ ಕಡ್ಡಾಯಬೇಕು ಎಂದು ಕುಂದಾಪುರ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ವಿನೋದ್ ಕ್ರಾಸ್ಟೊ ಹೇಳಿದರು.
ಕುಂದಾಪುರದ ಸೇಂಟ್ ಮೇರಿಸ್ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಸಾಧಕ ಮಕ್ಕಳನ್ನು ಅಭಿನಂದಿಸಿ ಮಾತನಾಡಿದರು.
ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅವರ ಆಪ್ತ ಕಾರ್ಯದರ್ಶಿ ಹರೀಶ್ ಕುಮಾರ್ ಶೆಟ್ಟಿ ಶುಭಾಸಂಶನೆಗೈದರು. ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವುದರಿಂದಿಗೆ ದಾನಿಗಳನ್ನು ಗೌರವಿಸಲಾಯಿತು. ಕುಂದಾಪುರ ವಲಯದ ಪ್ರಧಾನ ಧರ್ಮಗುರು ಪಾವ್ಲ್ ರೇಗೊ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ನಾಯಕ ಮಹ್ಮಮದ್ ಆಫ್ರಾನ್ ಉಪಸ್ಥಿತರಿದ್ದರು. ಪ್ರಾಂಶುಪಾಲೆ ರೇಷ್ಮಾ ಫರ್ನಾಂಡಿಸ್ ಸ್ವಾಗತಿಸಿದರು. ಜೊನಿಟಾ ಮೆಂಡೊನ್ಸಾ ವಂದಿಸಿದಳು. ರೊಸ್ಲಿನ್ ಡಿಸೋಜ, ಫಾತಿಮಾತ್ತುಲ್ ಹನೆಲ್ಟ್, ಸರಿತಾ ವಾಸ್ ಕಾರ್ಯಕ್ರಮ ನಿರೂಪಿಸಿದರು. ನಾಗರಾಜ್ ಶೆಟ್ಟಿ, ಪ್ರೀತಿ ಕ್ರಾಸ್ತಾ, ಸುಷ್ಮಾ ಕೆ.ಎನ್, ಶರ್ಮಿಳಾ ಮಿನೆಜೆಸ್, ವಸಂತ ಕುಮಾರ್ ಶೆಟ್ಟಿ, ಪ್ರಫುಲ್ಲಾ ಸಹಕರಿಸಿದರು.