

ಕೊಕ್ಕರ್ಣೆ: ಗ್ರಾಮೀಣ ಭಾಗದಲ್ಲಿರುವ ಕೊಕ್ಕರ್ಣೆ ರೋಟರಿ ಕ್ಲಬ್ ಸಮಾಜಮುಖಿ ಕೆಲಸ ಮಾಡುತ್ತಿದ್ದು ಇದರಿಂದ ಸಾರ್ವಜನಿಕರಿಗೆ ಹಲವಾರು ಉಪಯೋಗವಾಗುತ್ತಿದೆ. ಈಗ ಕೊಕ್ಕರ್ಣೆ ಪರಿಸರದವರಿಗೆ ಆಂಬುಲೆನ್ಸ್ ನೀಡುವುದರ ಮೂಲಕ ತುರ್ತು ಸೇವೆಗೆ ಸಹಾಯವಾಗಿದೆ ಎಂದು ಜಿಲ್ಲಾ ಗವರ್ನರ್ ಸಿ.ಎ.ದೇವಾನಂದ್ ಶ್ಲಾಘನೆ ವ್ಯಕ್ತಪಡಿಸಿದರು.
ಕೊಕ್ಕರ್ಣೆ ನಾರಾಯಣಗುರು ಸಭಾಭವನದಲ್ಲಿ ಮಂಗಳವಾರ ಕೊಕ್ಕರ್ಣೆ ರೋಟರಿ ಕ್ಲಬ್ ನಿಕಟಪೂರ್ವ ಅಧ್ಯಕ್ಷ ಸಿಎ ರಘುರಾಮ್ ಎಂ.ಎಚ್. ಮತ್ತು ಶಾಲಿನಿ ದಂಪತಿ ಕೊಡಮಾಡಿದ ಆಂಬುಲೆನ್ಸ್ ಹಸ್ತಾಂತರಿಸಿ ಮಾತನಾಡಿದರು.
ವಾಹನದ ಕೀಲಿಕೈಯನ್ನು ಕೊಕ್ಕರ್ಣೆ ಗ್ರಾಪಂ ಅಧ್ಯಕ್ಷ ಜಯಂತ್ ಪೂಜಾರಿ ಅವರಿಗೆ ಹಸ್ತಾಂತರಿಸಿದರು. ರೇಖಾ ದೇವಾನಂದ್, ಅಸಿಸ್ಟೆಂಟ್ ಗವರ್ನರ್ ರಾಘವೇಂದ್ರ ಸಾಮಗ, ಕ್ಲಬ್ ಅಡ್ವೈಸರ್ ಉದಯ್ ಕುಮಾರ್ ಶೆಟ್ಟಿ, ವಲಯ ಸೇನಾನಿ ದಿನೇಶ್ ಕುಮಾರ್ ನಾಯರಿ, ಕೊಕ್ಕರ್ಣೆ ರೋಟರಿ ಕ್ಲಬ್ ಅಧ್ಯಕ್ಷ ಕಾಶೀನಾಥ್ ಶೆಣೈ ಕಜ್ಕೆ, ಕಾರ್ಯದರ್ಶಿ ನಾಗರಾಜ ನಾಯ್ಕ, ಸ್ಥಾಪಕ ಅಧ್ಯಕ್ಷ ಪ್ರಸಾದ್ ಹೆಗ್ಡೆ ಮಾರಾಳಿ, ಸದಸ್ಯರು, ತಾಪಂ ಮಾಜಿ ಸದಸ್ಯೆ ಡಾ.ಸುನೀತಾ ಡಿ.ಶೆಟ್ಟಿ, ಕೊಕ್ಕರ್ಣೆ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೆರಿಯಣ್ಣ ಶೆಟ್ಟಿ, ಉಪಾಧ್ಯಕ್ಷೆ, ಸದಸ್ಯರು ಮೊದಲಾದವರಿದ್ದರು. ಕೊಕ್ಕರ್ಣೆ ರೋಟರಿ ಕ್ಲಬ್ ಸದಸ್ಯ ವಿಶ್ವನಾಥ್ ಶೆಟ್ಟಿ ನಿರೂಪಿಸಿದರು. ಮಾಜಿ ಕಾರ್ಯದರ್ಶಿ ಅರುಣ್ ಕುಮಾರ್ ಶೆಟ್ಟಿ ವಂದಿಸಿದರು.