ಮನುಕುಲಕ್ಕೆ ನೈತಿಕ ಪಾಠ ಅವಶ್ಯ

5ss2mahotsavake sadasivaswamy chalane
Published on

ಶನಿವಾರಸಂತೆ: ಮನುಕುಲಕ್ಕೆ ನೈತಿಕ ಪಾಠದ ಅವಶ್ಯಕತೆ ಅಗತ್ಯವಾಗಿದೆ ಎಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಮಠಾಧೀಶ ಶ್ರೀ ಸದಾಶಿವ ಸ್ವಾಮೀಜಿ ಅಭಿಪ್ರಾಯಪಟ್ಟರು.


ನೀರಗುಂದ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದ ವೀರಭದ್ರೇಶ್ವರಸ್ವಾಮಿ ಜನ್ಮ ವರ್ಧಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.


ಸತ್ಯ-ಶುದ್ಧ, ಸನ್ನಡತೆಯ, ಸ್ವಾತಿಕ ಬದುಕಿನ ಚೈತನ್ಯ ಶಕ್ತಿಯೇ ವೀರಭದ್ರೇಶ್ವರ ದೇವರು ಎಂದು ಹೇಳಿದರು. ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ ಮಾತನಾಡಿ, ಶ್ರೀ ವೀರಭದ್ರೇಶ್ವರಸ್ವಾಮಿ ಧರ್ಮಗಳ ಜತೆ ಹೋರಾಡಲು ಅವತರಿಸಿ ಪ್ರೇರಣಾದಾಯಕವಾಗಿದ್ದಾರೆ. ಅವರ ಅವತಾರವೆ ವಿಸ್ಮಯ ಮತ್ತು ಪವಾಡವಾಗಿದೆ ಎಂದು ಹೇಳಿದರು.


ಕಲ್ಲಳ್ಳಿ ಮಠದ ಶ್ರೀ ರುದ್ರಮುನಿ ಸ್ವಾಮೀಜಿ, ದೊಡ್ಡಬಳ್ಳಾಪುರ ಮಠದ ಶ್ರೀ ನಿಶ್ಚಲ ದೇಶಿಕೇಂದ್ರ ಸ್ವಾಮೀಜಿ, ನೀರುಗುಂದ ಗ್ರಾಮದ ದೇವಸ್ಥಾನ ಸಮಿತಿ ಅಧ್ಯಕ್ಷ ಕೆ.ಎನ್.ರುದ್ರಪ್ಪ, ಕಾರ್ಯದರ್ಶಿ ನಾಗೇಶ್, ಬೆಂಗಳೂರು ಸಿದ್ಧಗಂಗಾ ಶಾಖಾ ಮಠದ ಮಹಿಳಾ ಸಂಘಟನಾ ವೇದಿಕೆ ಅಧ್ಯಕ್ಷೆ ಉಷಾ ಯೋಗಾನಂದ್, ಎಸ್.ಮಹೇಶ್, ಎಚ್.ಎಂ.ದಿವಾಕರ್, ಕಾರ್ಯದರ್ಶಿ ದಯಾನಂದ್ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net