

ಮಸ್ಕಿ: ರೈತ ಸಂಪರ್ಕ ಕೇಂದ್ರಕ್ಕೆ ಸಿಬ್ಬಂದಿಗಳ ಕೊರತೆ ಇದ್ದು, ನೇಮಕಕ್ಕೆ ಕ್ರಮಕೈಗೊಳ್ಳುವಂತೆ ಶಾಸಕ ಆರ್.ಬಸನಗೌಡ ತುರ್ವಿಹಾಳ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದನ್ನೂ ಓದಿ: ಹೊಳೆಹೊನ್ನೂರು ರೈತರನ್ನು ಒಕ್ಕಲೆಬ್ಬಿಸಬೇಡಿ
ಪಟ್ಟಣದ ಸೂರ್ಯ ನಗರದಲ್ಲಿರುವ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಕಡಲೆ ಬೀಜ ವಿತರಿಸಿ ಶುಕ್ರವಾರ ಮಾತನಾಡಿದರು.
ತಾಲೂಕಿನಲ್ಲಿ ಮುಂಗಾರು ಹಂಗಾಮಿಗೆ ಉತ್ತಮ ಮಳೆಯಾಗಿದ್ದು, ಇದರಿಂದ ಬೆಳೆಗಳು ಸಹ ಉತ್ತಮವಾಗಿವೆ. ಸರ್ಕಾರ ರೈತರ ಪರವಾಗಿದ್ದು, ಅನ್ನದಾತರು ಭಯಪಡುವ ಅವಶ್ಯಕತೆ ಇಲ್ಲ ಎಂದರು.
ಮಸ್ಕಿ ಗ್ರಾಮೀಣ ಘಟಕ ಅಧ್ಯಕ್ಷ ಹನುಮಂತಪ್ಪ ಮುದ್ದಾಪೂರು, ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಮಹಿಬೂಬಸಾಬ್ ಮುದ್ದಾಪೂರು ಪ್ರಮುಖರಾದ ನೀರುಪಾದೇಪ್ಪ ವಕೀಲ, ಬಸನಗೌಡ ಪೊಲೀಸ್ ಪಾಟೀಲ್, ಎಂ.ಅಮರೇಶ, ಕೃಷ್ಣಾ ಚಿಗರಿ, ನಾರಾಯಣಪ್ಪ, ಶಬ್ಬೀರ್‌ಸಾಬ್, ಶಿವುರಡ್ಡಿ ನಿಸಾರ, ಶರಣಪ್ಪ ಎಲಿಗಾರ, ನಾಗರತ್ನ ಇದ್ದರು.