30ಕ್ಕೆ ಮುಂಗಾರು ಮುಕ್ತಾಯ:ರಾಜ್ಯದಲ್ಲಿ 4 ದಿನ ಸಾಧಾರಣ ಮಳೆ

indian-mansoon
Published on

ಬೆಂಗಳೂರು:ರಾಜ್ಯದಲ್ಲಿ ಮುಂದಿನ 4 ದಿನ ಸಾಧಾರಣ ವರ್ಷಧಾರೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ಕೊಟ್ಟಿದೆ.

ದಕ್ಷಿಣ ಕನ್ನಡದ ಮಂಗಳೂರು,ದಾವಣಗೆರೆ, ಹಾವೇರಿಯ ಹನುಮಾನ್​ಮಟ್ಟಿ, ಯಾದಗಿರಿಯ ಭೀಮರಾಯನಗುಡಿ ಸೇರಿ ರಾಜ್ಯದ ಕೆಲವೆಡೆ ಶನಿವಾರ ಸಾಧಾರಣ ವರ್ಷಧಾರೆಯಾಗಿದೆ. ದಕ್ಷಿಣ ಕನ್ನಡ,ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಸೆ.30ರಂದು ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅರ್ಲಟ್​ ಕೊಟ್ಟಿದೆ.

ಬೆಂಗಳೂರು, ಬೆಂ. ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರದಲ್ಲಿ ಸೆ.29ರಿಂದ ಮುಂದಿನ 4 ದಿನ ಹಾಗೂ ಬಾಗಲಕೋಟೆ, ಬೆಳಗಾವಿ, ಬೀದರ್​, ಧಾರವಾಡ, ಗದಗ, ಹಾವೇರಿ, ಕಲಬುರಗಿ, ರಾಯಚೂರು, ಕೊಪ್ಪಳ, ವಿಜಯಪುರ,ಯಾದಗಿರಿಯಲ್ಲಿ ಸೆ.30ರಿಂದ ಅ.3ರವರೆಗೆ ಗುಡುಗು ಸಹಿತ ಸಾಧಾರಣ ಮಳೆ ಬೀಳಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ಅ.1ರಿಂದ ಹಿಂಗಾರು:ರಾಜ್ಯದಲ್ಲಿ ಪ್ರಸಕ್ತ ಸಾಲಿನ ಮುಂಗಾರು ಸೆ.30ರಂದು ಪೂರ್ಣಗೊಳ್ಳಲಿದೆ. ಜೂ 1ರಿಂದ ಸೆ.30ರವರೆಗೆ ಅಂದರೆ 4 ತಿಂಗಳ ಕಾಲ ಮುಂಗಾರು ಆಶಾದಾಯಕವಾಗಿತ್ತು. ಸದ್ಯ ಬಹುತೇಕ ಜಿಲ್ಲೆಗಳಲ್ಲಿ ಈಗಾಗಲೇ ಮುಂಗಾರು ದುರ್ಬಳಗೊಂಡಿದೆ. ಅ.1ರಂದು ಹಿಂಗಾರು ಶುರುವಾಗಲಿದ್ದು, ಈಗಾಗಲೇ ಗುಡುಗು ಸಹಿತ ಕೆಲ ಜಿಲ್ಲೆಗಳಲ್ಲಿ ಹಿಂಗಾರು ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮೂನ್ಸೂಚನೆ ಕೊಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net